ಸಿಡಿಯಲ್ಲಿರುವ ಯುವತಿ ನನಗೆ ಪರಿಚಯ. ನನ್ನ ಸ್ನೇಹಿತನಿಂದ ಫೋನ್ ನಂಬರ್ ಪಡೆದು ನನಗೆ ಕರೆ ಮಾಡಿದ್ದಳು. ತನಗಾಗಿರು ಅನ್ಯಾಯದ ಬಗ್ಗೆಯೂ ಹೇಳಿದ್ದಳು. ನ್ಯಾಯಕೊಡಿಸುವಂತೆ ಕೇಳಿದ್ದಳು. ಆದರೆ ಸರಿಯಾದ ಸಾಕ್ಷ್ಯವಿಲ್ಲ ಎಂದು ಸದ್ಯಕ್ಕೆ ಸುಮ್ಮನಿದ್ದೆ. ಅದೇ ವೇಳೆ ನನ್ನ ಮಗುವಿನ ನಾಮಕರಣ ಬಂದಿತ್ತು. ಹಾಗಾಗಿ ನಾಮಕರಣಕ್ಕೆ ಬರುವಂತೆ ಯುವತಿಯನ್ನು ಕರೆದಿದ್ದೆ. ಯುವತಿ ನಾಮಕರಣಕ್ಕೆ ಬಂದಿದ್ದಳು. ನನ್ನ ಮಗುವಿನ ನಾಮಕರಣಕ್ಕೆ ಯುವತಿ ಮಾತ್ರವಲ್ಲ ಹಲವು ರಾಜಕೀಯ ಮುಖಂಡರು ಬಂದಿದ್ದರು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಹೀಗೆ ಎಲ್ಲಾ ಪಕ್ಷದ ರಾಜಕೀಯ ನಾಯಕರೂ ಬಂದಿದ್ದರು ಎಂದು ಹೇಳಿದ್ದಾರೆ.
ಸಿಡಿ ಪ್ರಕರಣದಲ್ಲಿ ನನ್ನ ಕೈವಾಡವಿಲ್ಲ. ಸಿಡಿ ಕೇಸ್ ಹೇಗೆ ಹೊರಗೆ ಬಂತು ಎಂಬುದೂ ನನಗೆ ಗೊತ್ತಿಲ್ಲ. ನಾನು ಯಾವುದೇ ಹಣ ಪಡೆದುಕೊಂಡಿಲ್ಲ. 5 ಕೋಟಿ ಡೀಲ್ ಎಂದು ನನ್ನ ವಿರುದ್ಧ ಅನಗತ್ಯ ಆರೋಪ ಮಾಡಲಾಗುತ್ತಿದೆ. ನಾನು ಪತ್ರಕರ್ತನಾಗಿ ಕೆಲಸ ಮಾಡುವುದರ ಜೊತೆಗೆ ಬೇರೆ ಸಣ್ಣಪುಟ್ಟ ಕೆಲಸವನ್ನೂ ಮಾಡುತ್ತಾ ಊರಿನಲ್ಲಿ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದೇನೆ. ನನ್ನ ಪಾತ್ರವೇ ಇಲ್ಲ ಅಂದ ಮೇಲೆ ದುಡ್ದಿನ ವಿಚಾರ ಎಲ್ಲಿಂದ ಬಂತು? ರಮೇಶ್ ಜಾರಕಿಹೊಳಿ ಮಾಡಬಾರದ ಕೆಲಸ ಮಾಡಿದ್ದಾರೆ. ಅವರು ಶಿಕ್ಷೆ ಅನುಭವಿಸುವುದು ಬಿಟ್ಟು ನಿರಪರಾಧಿಗಳನ್ನು ಶಿಕ್ಷಿಸುತ್ತಿದ್ದಾರೆ. ಪ್ರಕರಣದಲ್ಲಿ ಸಂಬಂಧವೇ ಇಲ್ಲದ ನಿರ್ದೋಷಿ ನಾನು. ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ಪ್ರತಿದಿನ ನನ್ನ ಹೆಂಡತಿ, ಮಕ್ಕಳು, ಕುಟುಂಬ ನೋವನುಭವಿಸುವಂತಾಗಿದೆ.
ಸಿಡಿ ಪ್ರಕರಣದ ಬೆನ್ನಲ್ಲೇ ರಮೇಶ್ ಜಾರಕಿಹೊಳಿಗೆ ಬಿಜೆಪಿಯಿಂದ ಮತ್ತೊಂದು ಶಾಕ್
ನಾನು ಈಗಲೇ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬಹುದಿತ್ತು. ಆದರೆ ಬಂದರೆ ಏನಾಗುತ್ತೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಹಾಗಾಗಿ ನಾನು 5-10 ದಿನಗಳಲ್ಲಿ ತನಿಖಾಧಿಕಾರಿಗಳ ಮುಂದೆ ಬಂದು ಹಾಜರಾಗುತ್ತೇನೆ. ನನ್ನ ಬಳಿ ಇರುವ ಎಲ್ಲಾ ಮಾಹಿತಿಯನ್ನು ನೀಡುತ್ತೇನೆ. ಈ ಪ್ರಕರಣದಲ್ಲಿ ನಾನು ನಿರ್ದೋಷಿ ಎಂಬುದನ್ನು ಸಾಬೀತು ಮಾಡುತ್ತೇನೆ ಎಂದು ಹೇಳಿದ್ದಾರೆ.