![](https://kannadadunia.com/wp-content/uploads/2020/09/WhatsApp-Image-2020-09-26-at-2.10.27-PM.jpeg)
ಬೆಂಗಳೂರು: ಸ್ಯಾಂಡಲ್ ವುಡ್ ನಟ ಶರಣ್ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಎರಡು ದಿನಗಳಿಂದ ಶರಣ್ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದೀಗ ಮಲ್ಲಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶರಣ್ ತಮ್ಮ ಹೊಸ ಸಿನಿಮಾ ಅವತಾರ ಪುರುಷ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದರು. ಚಿತ್ರೀಕರಣದ ವೇಳೆಯೇ ಅವರಿಗೆ ಅನಾರೋಗ್ಯ ಎದುರಾಗಿದೆ. ತೀವ್ರ ಹೊಟ್ಟೆನೋವಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.