ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಆರ್. ಆರ್. ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಮುನಿರತ್ನ ಅವರ ಪಾಲಾಗಿದ್ದು, ನಾಳೆ ಬೆಳಿಗ್ಗೆ ಮುನಿರತ್ನ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸಚಿವ ಎಸ್. ಟಿ. ಸೋಮಶೇಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಅವರಿಗೆ ನಾಳೆ ಬೆಳಿಗ್ಗೆ 9:30ಕ್ಕೆ ಮುಖ್ಯಮಂತ್ರಿಗಳು ತಮ್ಮ ಕಚೇರಿಗೆ ಬರಲು ಹೇಳಿದ್ದಾರೆ. ಈ ವೇಳೆ ಅಂತಿಮವಾಗಿ ಮುನಿರತ್ನ ಹೆಸರು ಪ್ರಕಟಿಸಲಾಗುತ್ತದೆ. ನಂತರ ನಾಳೆ 11 ಗಂಟೆಗೆ ಮುನಿರತ್ನ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು. ಈ ಮೂಲಕ ಆರ್. ಆರ್. ನಗರ ಬಿಜೆಪಿ ಟಿಕೆಟ್ ಮುನಿರತ್ನ ಅವರಿಗೆ ಫಿಕ್ಸ್ ಆದಂತಾಗಿದೆ.
ಇನ್ನು ತುಳಸಿ ಮುನಿರಾಜು ಬಗ್ಗೆ ಪ್ರತಿಕ್ರಿಯಿಸಿರುವ ಎಸ್. ಟಿ. ಸೋಮಶೇಖರ್, ಅವರು ಟಿಕೆಟ್ ಕೇಳುವುದು ಸ್ವಾಭಾವಿಕ. ಆದರೆ ಯಾರು ಸಮರ್ಥರಿದ್ದಾರೆ ಎಂಬುದನ್ನು ನೋಡಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಹೀಗಾಗಿ ಮುನಿರತ್ನ ಅವರಿಗೆ ಟಿಕೆಟ್ ಖಚಿತವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.