alex Certify ಆರ್ಥಿಕ ಸಂಕಷ್ಟ: ಶಾಂತಿನಗರ ಬಸ್ ನಿಲ್ದಾಣವನ್ನೇ ಅಡವಿಟ್ಟ ಸಾರಿಗೆ ಇಲಾಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಥಿಕ ಸಂಕಷ್ಟ: ಶಾಂತಿನಗರ ಬಸ್ ನಿಲ್ದಾಣವನ್ನೇ ಅಡವಿಟ್ಟ ಸಾರಿಗೆ ಇಲಾಖೆ

ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಹಾಗೂ ಸಾರಿಗೆ ಇಲಾಖೆ ಇದೀಗ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣವನ್ನೇ ಅಡಮಾನವಿಟ್ಟಿರುವ ವಿಷಯ ಬಹಿರಂಗವಾಗಿದೆ.

ಸಾರಿಗೆ ಸಿಬ್ಬಂದಿಗಳ ವೇತನ ಪಾವತಿ, ಇಲಾಖೆ ಖರ್ಚುವೆಚ್ಚ ಸೇರಿದಂತೆ ಹಲವು ಕಾರಣಗಳಿಗಾಗಿ ಸಾರಿಗೆ ಇಲಾಖೆ ಕಳೆದ ನಾಲ್ಕು ತಿಂಗಳಲ್ಲಿ 160 ಕೋಟಿ ರೂ. ಸಾಲವನ್ನು ಕೆನರಾ ಬ್ಯಾಂಕ್ ನಿಂದ ಪಡೆದುಕೊಂಡಿದ್ದು, ಅದಕ್ಕಾಗಿ ಶಾಂತಿನಗರದ ಬಸ್ ನಿಲ್ದಾಣವನ್ನು ಬ್ಯಾಂಕ್ ಗೆ ಅಡಮಾನವಿಟ್ಟಿದೆ.

ಸಚಿವ ಆನಂದ್ ಸಿಂಗ್ ವಿರುದ್ಧ ಕಿಡಿಕಾರಿದ ಶಾಸಕ ಸೋಮಶೇಖರ್ ರೆಡ್ಡಿ

ಆನಂದ್ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ 2019ರ ಅಕ್ಟೋಬರ್ ನಿಂದ 2021ರ ಜನವರಿವರೆಗೆ ಬಿಎಂಟಿಸಿ ಸಂಸ್ಥೆ ಪಡೆದಿರುವ ಸಾಲ, ಅದಕ್ಕೆ ಕಟ್ಟುತ್ತಿರುವ ಬಡ್ಡಿ, ಸಾಲಕ್ಕೆ ಅಡಮಾನವಿಟ್ಟ ಆಸ್ತಿ ಕುರಿತು ಮಾಹಿತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಾರಿಗೆ ಇಲಾಖೆ ಅಕೌಂಟ್ ಸೆಕ್ಷನ್ ನಿಂದ ಮಾಹಿತಿ ನೀಡಲಾಗಿದ್ದು, ಆರ್ಥಿಕ ಸಂಕಷ್ಟದಿಂದಾಗಿ ಸಾರಿಗೆ ಇಲಾಖೆ ಶಾಂತಿನಗರ ಬಸ್ ನಿಲ್ದಾಣವನ್ನು ಕೆನರಾ ಬ್ಯಾಂಕ್ ಗೆ ಅಡವಿಟ್ಟು 160 ಕೋಟಿ ಸಾಲ ಪಡೆದುಕೊಂಡಿದೆ. ಇದಕ್ಕೆ ಪ್ರತಿ ತಿಂಗಳು 1.04 ಕೋಟಿ ಬಡ್ಡಿ ಕಟ್ಟಲಾಗುತ್ತಿದೆ ಎಂಬುದು ಬಹಿರಂಗವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...