ಮಂಗಳೂರು: ಆನ್ ಲೈನ್ ಗೇಮ್ ನಿಂದ ಏನೆಲ್ಲ ದುರಂತಗಳು ಸಂಭವಿಸುತ್ತವೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಎಂಬಂತಿದೆ ಈ ಸ್ಟೋರಿ. ಫ್ರೀ ಫೈಯರ್ ಗೇಮ್ ನಲ್ಲಿ ನಿರಂತರವಾಗಿ ತನ್ನನ್ನು ಸೋಲಿಸಿದ್ದಾನೆ ಎಂದು ಬಾಲಕನೊಬ್ಬ ತನ್ನ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ಮಂಗಳೂರಿನ ಕೆ.ಸಿ.ರೋಡ್ ನಲ್ಲಿ ನಡೆದಿದೆ.
ಈಜಲು ಹೋದಾಗಲೇ ಕಾದಿತ್ತು ದುರ್ವಿದಿ, ಮೂವರು ವಿದ್ಯಾರ್ಥಿಗಳು ನೀರು ಪಾಲು
12 ವರ್ಷದ ಆಕೀಫ್ ಕೊಲೆಯಾದ ಬಾಲಕ. ಮನೆಯ ಸಮೀಪವೇ ಇದ್ದ ಶಾಲೆಯ ಮೈದಾನದ ಮೂಲೆಯಲ್ಲಿ ಮುಖಕ್ಕೆ ಜಜ್ಜಿದ ರೀತಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಉಳ್ಳಾಲ ಪೊಲೀಸರಿಗೆ ಶಾಕಿಂಗ್ ವಿಷಯವೊಂದು ಗೊತ್ತಾಗಿದೆ.
ಫ್ರೀ ಫೈಯರ್ ಆನ್ ಲೈನ್ ಗೇಮ್ ಆಡಲೆಂದು ಆಕೀಫ್ ಹಾಗೂ ಆತನ ಸ್ನೇಹಿತ ಇಬ್ಬರೂ ಶಾಲೆಯ ಮೈದಾನಕ್ಕೆ ಹೋಗಿ ಮೊಬೈಲ್ ನಲ್ಲಿ ಆಟವಾಡುತ್ತಾ ಕುಳಿತಿದ್ದಾರೆ. ಹಲವು ದಿನಗಳಿಂದ ಇಬ್ಬರು ಬಾಲಕರು ಈ ಗೇಮ್ ಆಡುತ್ತಿದ್ದರು. ಪ್ರತಿ ಬಾರಿ ಆಕೀಫ್ ಈ ಗೇಮ್ ನಲ್ಲಿ ಗೆಲ್ಲುತ್ತಿದ್ದ. ಅದರಂತೆ ಇಂದೂ ಕೂಡ ಆಟದಲ್ಲಿ ಆಕೀಫ್ ಗೆಲುವು ಸಾಧಿಸಿದ್ದಾನೆ. ಇದರಿಂದ ಬೇಸತ್ತ ಆತನ ಸ್ನೇಹಿತ ಆಕೀಫ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಆತನ ಮುಖವನ್ನು ಜಜ್ಜಿ ಸಾಯಿಸಿದ್ದಾನೆ. ಬಾಲಕನನ್ನು ಕಳೆದುಕೊಂಡ ಕುಟುಂಬದ ರೋಧನ ಮುಗಿಲು ಮುಟ್ಟಿದೆ.