ಬೆಂಗಳೂರು: ಕೊರೊನಾ ಸೋಂಕಿತರಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಭಯ ಹುಟ್ಟಿಸಿ ರೋಗಿಗಳನ್ನು ಸಾಯಿಸುವ ಕೆಲಸ ನಡೆಯುತ್ತಿದೆ. ಇಂತದ್ದೊಂದು ಮಾಫಿಯಾ ನಡೆಯುತ್ತಿದ್ದು, ಆಸ್ಪತ್ರೆಗಳು, ವೈದ್ಯರು, ಲ್ಯಾಬ್ ಹಾಗೂ ಆಕ್ಸಿಜನ್ ಸ್ಯಾಚುರೇಷನ್ ಯಂತ್ರಗಳನ್ನು ತಯಾರಿಸುವ ಕಂಪನಿಗಳೂ ಕೂಡ ಈ ಮಾಫಿಯಾದಲ್ಲಿ ಭಾಗಿಯಾಗಿವೆ ಎಂಬ ಆಘಾತಕಾರಿ ಅಂಶವನ್ನು ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ ಕೊರೊನಾ ಸೋಂಕಿತರು ಆಕ್ಸಿಜನ್ ಲೆವಲ್ ಹೆಚ್ಚಿಸಿಕೊಳ್ಳಲು ಯಾವ ಕ್ರಮವನ್ನು ಅನುಸರಿಸಬೇಕು ಎಂಬ ಮಹತ್ವದ ಮಾಹಿತಿಯನ್ನು ಕೂಡ ಡಾ ರಾಜು ತಮ್ಮ ಈ ವಿಡಿಯೋದಲ್ಲಿ ತಿಳಿಸಿದ್ದಾರೆ.
ಆಕ್ಸಿಜನ್ ಸ್ಯಾಚುರೇಷನ್ ಪತ್ತೆಗಾಗಿ ಬಳಸುವ ಶೇ.99 ಯಂತ್ರಗಳೇ ನಕಲಿ. ರೋಗಿಗಳ ಪ್ರಾಣ ಉಳಿಸಬೇಕಾದ ವೈದ್ಯರುಗಳೇ ಇಂದು ಈ ಯಂತ್ರಗಳ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ದುರಂತ. ರೋಗಿಗಳಲ್ಲಿ ಆಕ್ಸಿಜನ್ ಸ್ಯಾಚುರೇಷನ್ ಕಡಿಮೆಯಿದೆ. 9೦-95ರಷ್ಟು ಬಂದರೂ ಕೂಡ ಅಪಾಯ ಎಂದು ಆಸ್ಪತ್ರೆಗೆ ದಾಖಲಿಸಿಕೊಳ್ಳುವುದು RTPCR, ಸಿಟಿ ಸ್ಕ್ಯಾನ್ ಮಾಡಬೇಕು ಎಂದು ಭಯದ ವಾತಾವರಣ ನಿರ್ಮಿಸುವ ಕೆಲಸ ನಡೆಯುತ್ತಿದೆ. ಆಕ್ಸಿಜನ್ ಸ್ಯಾಚುರೇಶನ್ ಕಡಿಮೆ ಬಂತೆಂದು ರೋಗಿಗಳು ಭಯಪಡುವ ಅಗತ್ಯವಿಲ್ಲ. ನಮ್ಮಲ್ಲಿನ ಆಕ್ಸಿಜನ್ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಕೆಲ ಸುಲಭ ಉಪಾಯಗಳನ್ನು ಅನುಸರಿಸಿದರೆ ಸಾಕು ಎಂದು ಡಾ. ರಾಜು ವಿವರಿಸಿದ್ದಾರೆ.
ಬೆಂಗಳೂರು ಜನತೆಗೆ ಬೆಚ್ಚಿಬೀಳಿಸುವಂತಿದೆ ಕೊರೋನಾ ಕುರಿತ ಈ ಸುದ್ದಿ
ಒಂದೊಮ್ಮೆ ನಿಮ್ಮಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಿದ್ದರೆ ಮೊದಲು ಉತ್ತಮವಾದ ಗಾಳಿ, ಬೆಳಕು ಇರುವ ಕಡೆ ಆರಾಮವಾಗಿರಿ. ಮನೆಯಲ್ಲಿ ಯಾವುದೇ ಕಾರಣಕ್ಕೂ ಮಾಸ್ಕ್ ಧರಿಸಿಕೊಳ್ಳಬಾರದು. ಸಡಿಲವಾದ ಕಾಟನ್ ಬಟ್ಟೆಗಳನ್ನು ಬಳಸಿ. ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಹೆಚ್ಚು ಹೆಚ್ಚು ನೀರು ಕುಡಿಯಿರಿ. ಅಗತ್ಯವಿದ್ದರೆ ಆಕ್ಸಿಜನ್ ಗಳನ್ನು ಪಡೆದು ಸೋಂಕಿತರನ್ನು ಮನೆಯಲ್ಲಿಯೇ ಇರಿಸಿ ವೈದ್ಯರ ಮಾರ್ಗದರ್ಶನ ಪಡೆದುಕೊಳ್ಳಿ. ಹೊರತು ಆಸ್ಪತ್ರೆಗಳಿಗೆ ದಾಖಲಿಸಲು ಹೋಗಬೇಡಿ. ಕೊರೊನಾ ಪಾಸಿಟಿವ್ ಎಂದಾಕ್ಷಣ ಹೆದರುವ ಅವಶ್ಯಕತೆಯಿಲ್ಲ, ಧೈರ್ಯವಾಗಿದ್ದರೆ ಸಾಕು ಎಂದು ಸಲಹೆ ನೀಡಿದ್ದಾರೆ. ಡಾ.ರಾಜು ಅವರ ಹೊಸ ವಿಡಿಯೋ ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
https://www.youtube.com/watch?v=KBeMKrQYwTk