alex Certify ಆಕರ್ಷಕ ಸೋಮೇಶ್ವರ ದೇವಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕರ್ಷಕ ಸೋಮೇಶ್ವರ ದೇವಾಲಯ

ಪ್ರಾಚೀನ ಮತ್ತು ಆಕರ್ಷಕ ವಾಸ್ತು ಶೈಲಿ ಹೊಂದಿರುವ ದೇವಾಲಯಗಳಲ್ಲಿ ಹಲಸೂರಿನ ಸೋಮೇಶ್ವರ ದೇವಾಲಯವೂ ಒಂದು. ಇದು ಅತ್ಯಂತ ಮಹತ್ವದ ಪಾರಂಪರಿಕ ಮತ್ತು ಐತಿಹಾಸಿಕ, ಧಾರ್ಮಿಕ ಕೇಂದ್ರವೂ ಆಗಿದೆ.

ಇದೊಂದು ಶೈವ ದೇವಾಲಯ. ಪೌರಾಣಿಕ ಕತೆಗಳ ಪ್ರಕಾರ ಮಹರ್ಷಿ ಮಾಂಡವ್ಯರು ತಪಸ್ಸು ಮಾಡುತ್ತಿದ್ದ ಪುಣ್ಯಾಶ್ರಮ ಇದಾಗಿತ್ತು. ಅವರು ಅರ್ಚನೆ ಮಾಡುತ್ತಿದ್ದ ಸೋಮೇಶ್ವರ ಲಿಂಗವೇ ಈ ದೇವಾಲಯದ ಭೂಷಣ.

ನಂತರ ಯಲಹಂಕ ನಾಡಪ್ರಭು ಜಯಪ್ಪಗೌಡ, ದೈವ ಪ್ರೇರಣೆಯಿಂದ ಇಲ್ಲಿ ದೇವಸ್ಥಾನ ಕಟ್ಟಿಸಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿ ಚೋಳರ, ವಿಜಯನಗರ ಅರಸರ, ಯಲಹಂಕ ನಾಡಪ್ರಭುಗಳ ಕಾಲದ ವಾಸ್ತುಶೈಲಿ, ಶಿಲ್ಪಕಲಾ ಪ್ರಾಕಾರಗಳ ಪರಿಚಯವಾಗುತ್ತದೆ.

ಚೌಕಾಕಾರದ ಗರ್ಭ ಗೃಹ, ಅರ್ಧ ಮಂಟಪ, ನವರಂಗ, ಪ್ರದಕ್ಷಿಣಾ ಪಥ, ಮುಖಮಂಟಪ, ಧ್ವಜಸ್ತಂಭ, ಬಲಿಪೀಠವಿದೆ. ಮುಖ್ಯ ದೇಗುಲದ ಎಡಬದಿಯಲ್ಲಿ ಕಾಮಾಕ್ಷಿ ಅಮ್ಮನವರ ಗುಡಿಯಿದೆ. ಈ ದೇವಾಲಯಕ್ಕೆ ದೊಡ್ಡ ಗೋಪುರಯುಕ್ತ ದ್ವಾರ ಬಾಗಿಲು ಇದೆ. ಅದರ ಎದುರಿಗೆ ನಂದಿ ಧ್ವಜಸ್ತಂಭವಿದೆ. ದೇವಸ್ಥಾನದ ಎಡಬದಿಯಲ್ಲಿ ಕಲ್ಯಾಣಿಯಿದೆ. ನಿತ್ಯ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಹಾಗೂ ಸಂಜೆ 5.30ರಿಂದ 8.30 ಕ್ಕೆ ಇಲ್ಲಿಗೆ ಭೇಟಿ ನೀಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...