ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಈ ಬಾರಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಿದೆ. ಇಂತದ್ದೊಂದು ಲಾಕ್ ಡೌನ್ ಅಗತ್ಯ ಖಂಡಿತವಾಗಿಯೂ ರಾಜ್ಯಕ್ಕೆ ಇತ್ತು ನಿಜ. ಆದರೆ ಎರಡನೇ ಅಲೆಯ ಈ ಸಂದರ್ಭದಲ್ಲಿ ಪ್ರತಿಯೊಂದು ಮನೆ ಮನೆಯಲ್ಲಿಯೂ ಓರ್ವ ಸೋಂಕಿತ ವ್ಯಕ್ತಿಯಾದರೂ ಇದ್ದೇ ಇದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ನಾವಿರುವಾಗ ತುರ್ತು ವಾಹನ ಓಡಾಟಕ್ಕೂ ಬ್ರೇಕ್ ಹಾಕಿದ್ದು ಎಷ್ಟು ಸರಿ? ಮೆಡಿಕಲ್ ಶಾಪ್ ಗಳಿಗೆ ಹೋಗಲೂ ಬಿಡುತ್ತಿಲ್ಲ. ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕೆಂದರೂ ಆಂಬುಲೆನ್ಸ್ ಆಗಲಿ, ಬೇರಾವುದೇ ವಾಹನಗಳಾಗಲಿ ಸಿಗುತ್ತಿಲ್ಲ. ಈ ಅವ್ಯವಸ್ಥೆಯ ಲಾಕ್ ಡೌನ್ ನಿಂದಾಗಿ ರೋಗಿಗಳು ರಸ್ತೆ ರಸ್ತೆಗಳಲ್ಲಿ, ಮನೆ ಮನೆಗಳಲ್ಲಿ ಸಾಯುವ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ಡಾ.ರಾಜು ತಮ್ಮ ಹೊಸ ವಿಡಿಯೋದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಲಾಕ್ ಡೌನ್ ಕ್ರಮದಿಂದ ಆಸ್ಪತ್ರೆಗಳಲ್ಲಿ ಸೋಂಕಿತರ ಸಾವಿನ ಸರಣಿ ಕಡಿಮೆಯಾಗಲಿದೆ. ಆದರೆ ಆಸ್ಪತ್ರೆಗಳಿಗೂ ಹೋಗಲಾಗದೇ, ಆಕ್ಸಿಜನ್ ಸಿಗದೇ, ಸೂಕ್ತ ಚಿಕಿತ್ಸೆ ಇಲ್ಲದೇ ರೋಗಿಗಳು ಬೀದಿ ಬೀದಿಗಳಲ್ಲಿ ಸಾವನ್ನಪ್ಪುವ ಸಂಖ್ಯೆ ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೋವಿಡ್ ವಿಚಾರವಾಗಿ ಮಹತ್ವದ ಹೇಳಿಕೆ ನೀಡಿದ ಮೃಗಾಲಯದ ಅಧಿಕಾರಿ
ಈ ಸಂಖ್ಯೆ ದುಪ್ಪಟ್ಟಾಗಲಿದೆ. ಇಂತಹ ಸಾವಿನ ಸಂಖ್ಯೆ ತಪ್ಪಿಸಲು ಸರ್ಕಾರ ಮೊದಲೇ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ ಮೊದಲು ಆಯಾ ಏರಿಯಾದಲ್ಲಿ ಲೋಕಲ್ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಬೇಕು. ಸ್ಥಳೀಯ ಸರ್ಕಾರಿ ಕಚೇರಿ, ಸಭಾ ಭವನಗಳಲ್ಲಿ 30-40 ಬೆಡ್ ಗಳ ಕೇರ್ ಸೆಂಟರ್ ತೆರೆದು, ಬೇಸಿಕ್ ಮೆಡಿಸಿನ್ ಗಳನ್ನು ಇರಿಸಬೇಕು. ಆನ್ ಲೈನ್ ಮೂಲಕ ವೈದ್ಯರ ಸಲಹೆ ಪಡೆದು ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು. ಬಳಿಕ 15 ದಿನಗಳ ಸ್ಟ್ರಿಕ್ಟ್ ಲಾಕ್ ಡೌನ್ ಜಾರಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಡಾ.ರಾಜು ತಮ್ಮ ಹೊಸ ವಿಡಿಯೋದಲ್ಲಿ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದು, ನೀವೂ ಕೂಡ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
https://www.youtube.com/watch?v=BOyOuNdJtEE