ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಕೊರೊನಾ ನಡುವೆ ಈ ವರ್ಷ ಅದ್ಧೂರಿ ದಸರಾ ಸಂಭ್ರಮಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಈ ವರ್ಷ ಕೊರೊನಾ ಇಲ್ಲದೇ ಇದ್ದಿದ್ದರೆ ಇಷ್ಟೊತ್ತಿಗೆ ಪ್ರವಾಸಿಗರ ದಂಡೇ ಮೈಸೂರಿನಲ್ಲಿ ತುಂಬಿ ತುಳುಕುತ್ತಿತ್ತು, ಪ್ರತಿ ರಸ್ತೆಯಲ್ಲೂ, ಪ್ರತಿಯೊಂದು ಮನೆಯಲ್ಲೂ ಹಬ್ಬದ ರಂಗು ಜೊರಾಗಿರುತ್ತಿತ್ತು. ಆದರೆ ಈ ವರ್ಷ ಇದಕ್ಕೆಲ್ಲಾ ಕೊರೊನಾ ಅಡ್ಡಿಯಾಗಿದೆ.
ಇನ್ನು ಈ ವರ್ಷ ಸರಳವಾಗಿ ದಸರಾ ಆಚರಣೆ ಮಾಡೋದಿಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಈಗಾಗಲೇ ಅರಮನೆಯಲ್ಲಿ ಗಜರಾಜರು ತಾಲೀಮು ನಡೆಸುತ್ತಿದ್ದಾರೆ. ಚಿನ್ನದ ಅಂಬಾರಿ ಹೊರಲು ನಡೆಸಲು ಅಭಿಮನ್ಯು ಸಿದ್ದನಾಗಿದ್ದಾನೆ. ವಿಶೇಷ ಅಂದರೆ ಅಭಿಮನ್ಯು ಜೊತೆ ಬಂದಿದ್ದ ಗೋಪಿ ಹಾಗೂ ವಿಕ್ರಮ ಎಂಬ ಆನೆಗಳು ಕೂಡ ಅಂಬಾರಿ ಹೊರುವುದಕ್ಕೆ ಸಿದ್ದವಾಗಿದ್ದಾವೆ. ತಾಲೀಮಿನಲ್ಲಿ ಸೈ ಎನಿಸಿಕೊಂಡಿವೆ.
ಸಾಮಾನ್ಯವಾಗಿ ಅಂಬಾರಿ ಹೊರುವ ಆನೆಯ ಜೊತೆಯಲ್ಲಿ ಮತ್ತೊಂದು ಆನೆಗೂ ಅಂಬಾರಿ ಹೊರುವ ತರಬೇತಿ ನೀಡುತ್ತಾರೆ. ಅದೇ ರೀತಿ ಈ ವರ್ಷ ಗೋಪಿ ಹಾಗೂ ವಿಕ್ರಮ ಎಂಬ ಆನೆಗಳಿಗೆ ತರಬೇತಿ ನೀಡಿದ್ದು, ಈ ಆನೆಗಳು ಕೂಡ ಭಾರದ ಅಂಬಾರಿಯನ್ನು ಹೊರುತ್ತವೆ ಎಂಬ ಭರವಸೆ ಮೂಡಿಸಿದೆ.