ಕೃಷಿಕರಿಗೆ ರಾಜ್ಯ ಸರ್ಕಾರ ಬಂಪರ್ ಸುದ್ದಿಯನ್ನು ನೀಡಿದೆ. ಪಡಿತರ ವ್ಯವಸ್ಥೆಯಲ್ಲಿ ಪೌಷ್ಟಿಕ ಆಹಾರ ನೀಡುವ ಸಲುವಾಗಿ ಅಕ್ಕಿಯ ಜೊತೆಗೆ ಜೋಳ ಮತ್ತು ರಾಗಿಯನ್ನು ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಜೋಳ ಮತ್ತು ರಾಗಿ ಬೆಳೆಯುವ ರೈತರಿಂದ ಬೆಂಬಲ ಬೆಲೆ ಮುಖಾಂತರ ಖರೀದಿಸಲು ತೀರ್ಮಾನಿಸಿದೆ.
ರೈತರಿಂದ ಯಾವುದೇ ಗರಿಷ್ಠ ಮಿತಿ ಇಲ್ಲದೆ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಬಿಳಿ ಜೋಳವಲ್ಲದೆ ಸಿಎಸ್ಎಚ್ 05, 14, 16, ಜೆ.ಕೆ.ಎಸ್.ಎಚ್. 22, 434 ಇತ್ಯಾದಿ ರೈತರು ಬೆಳೆದಿರುವ ಹೈಬ್ರಿಡ್ ಜೋಳವನ್ನೂ ಕೂಡ ಖರೀದಿಸಲಾಗುತ್ತದೆ.
2020-21 ನೇ ಸಾಲಿನಲ್ಲಿ ರೈತರಿಂದ ಭತ್ತ, ರಾಗಿ ಮತ್ತು ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದ್ದು, ಭತ್ತ ಸಾಮಾನ್ಯ ಪ್ರತಿ ಕ್ವಿಂಟಾಲ್ ಗೆ 1868 ರೂ., ಭತ್ತ ಗ್ರೇಡ್ ಎ 1888 ರೂ., ರಾಗಿ 3295 ರೂ., ಬಿಳಿಜೋಳ ಹೈಬ್ರಿಡ್ 2,620 ರೂ., ಬಿಳಿಜೋಳ ಮಾಲ್ದಂಡಿ 2640 ರೂ. ನಿಗದಿಪಡಿಸಲಾಗಿದೆ.