ಅನಧಿಕೃತವಾಗಿ ರಾತ್ರಿ ವೇಳೆಯಲ್ಲಿ ರಸ್ತೆ ಕತ್ತರಿಸುವವರಿಂದ ರಸ್ತೆಗಳು ಹಾಳಾಗುವುದರ ಜೊತೆಗೆ ಓಡಾಟಕ್ಕೂ ತೊಂದರೆ ಉಂಟಾಗುತ್ತಿತ್ತು. ಅಲ್ಲದೆ ಕತ್ತರಿಸಿದ ರಸ್ತೆಗಳನ್ನು ಸರಿಯಾಗಿ ನಿರ್ವಹಿಸದೇ ಅಪಘಾತಗಳು ಕೂಡ ಹೆಚ್ಚಾಗುತ್ತಿದ್ದವು. ಈ ನಿಟ್ಟಿನಲ್ಲಿ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಇದೀಗ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.
ಅನಧಿಕೃತವಾಗಿ ರಸ್ತೆ ಕತ್ತರಿಸುವವರಿಗೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತದೆ. ಅನಧಿಕೃತವಾಗಿ ರಸ್ತೆ ಕತ್ತರಿಸುವ ಖಾಸಗಿ ಅಥವಾ ಸರಕಾರಿ ಸಂಸ್ಥೆಗಳಿಗೆ 25 ಲಕ್ಷ ರೂಪಾಯಿ ಹಾಗೂ ಈ ಕೆಲಸವನ್ನು ಸಾರ್ವಜನಿಕರೇನಾದರು ಮಾಡಿದ್ದಲ್ಲಿ ಅವರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಲು ಆಯಾ ವಾರ್ಡ್‌ಗಳ ಎಂಜಿನಿಯರ್‌ಗಳಿಗೆ ಆದೇಶ ನೀಡಿದ್ದಾರೆ.
ಇನ್ನು ರಸ್ತೆ ಕತ್ತರಿಸಬೇಕು ಎಂದಾದರೆ ಬಿಬಿಎಂಪಿ ನಿಗದಿಪಡಿಸಿರುವ ಎಸ್‌ಒಪಿಗಳನ್ನು ಪಾಲಿಸಬೇಕು. ಅದರಂತೆಯೇ ವೈಜ್ಞಾನಿಕವಾಗಿ ರಸ್ತೆ ಕತ್ತರಿಸಬೇಕು ಎಂದು ಹೇಳಿದ್ದಾರೆ. ಅನುಮತಿ ಪಡೆದು ರಾತ್ರಿ ವೇಳೆ ರಸ್ತೆಗಳನ್ನು ಕತ್ತರಿಸುವವರು ಕೆಲಸದ ಸ್ಥಳದಲ್ಲಿ ಸೀರಿಯಲ್ ಎಲ್‌ಇಡಿ ದೀಪಗಳನ್ನು ಹಾಕಬೇಕು. ಹಾಗೆ ಬ್ಯಾರಿಕೇಡ್‌ಗಳನ್ನು ಹಾಕಿ ಕೆಲಸ ಮುಂದುವರೆಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.