ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ನಡೆಸಿದ ಸಂಶೋಧನೆಯಲ್ಲಿ ಪಾಲಿಶ್ ಅಕ್ಕಿಯ ಕುರಿತು ಶಾಕಿಂಗ್ ಸಂಗತಿ ಬಹಿರಂಗವಾಗಿದ್ದು, ಅನ್ನ ಮಾಡಲು ಪಾಲಿಶ್ ಮಾಡಿದ ಅಕ್ಕಿ ಬಳಸಿದರೆ ಅದರಲ್ಲಿ ವಿಟಮಿನ್ ಬಿ ಅಂಶ ಇರುವುದಿಲ್ಲ ಎಂಬುದು ಪತ್ತೆಯಾಗಿದೆ.
ಬಾಣಂತಿಯರು ಇಂತಹ ಅಕ್ಕಿಯಿಂದ ಮಾಡಿದ ಅನ್ನ ಸೇವಿಸಿದರೆ ಅಂತವರ ಎದೆಹಾಲಿನಲ್ಲಿ ಪೌಷ್ಟಿಕಾಂಶ ಪ್ರಮಾಣ ಕಡಿಮೆ ಇರುತ್ತದೆ ಎಂದು ತಿಳಿದುಬಂದಿದ್ದು, ಈ ತಾಯಂದಿರ ಎದೆಹಾಲು ಸೇವಿಸುವ ಶಿಶುಗಳಿಗೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿದೆ.
ತಾಯಂದಿರು ಸೇವಿಸುವ ಆಹಾರ ಪದ್ಧತಿ ಶಿಶುಗಳ ಆರೋಗ್ಯದಲ್ಲಿ ಮಹತ್ವದ ಪಾತ್ರ ವಹಿಸುವ ಹಿನ್ನೆಲೆಯಲ್ಲಿ ಬಾಣಂತಿಯರು ಕೆಂಪು ಅಕ್ಕಿ, ರಾಗಿ, ತರಕಾರಿ ಸೇರಿದಂತೆ ಜೀವಸತ್ವಗಳಿರುವ ಆಹಾರ ಸೇವಿಸುವುದು ಸೂಕ್ತ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.