alex Certify ಅಕುಲ್ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಭರ್ಜರಿ ಡ್ರಗ್ಸ್ ಪಾರ್ಟಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕುಲ್ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಭರ್ಜರಿ ಡ್ರಗ್ಸ್ ಪಾರ್ಟಿ…?

ಬೆಂಗಳೂರು: ನಿರೂಪಕ ಅಕುಲ್ ಬಾಲಾಜಿ ಒಡೆತನದ ಸನ್ ಶೈನ್ ರೆಸಾರ್ಟ್ ನಲ್ಲಿ ಡ್ರಗ್ಸ್ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿತ್ತು. ಸ್ಟಾರ್ ನಟ-ನಟಿಯರು, ನಟರ ಪತ್ನಿಯರು ಈ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭ್ಯವಾಗಿದೆ. ಇದೇ ಕಾರಣಕ್ಕಾಗಿ ಅಕುಲ್ ಬಾಲಾಜಿಯನ್ನು ವಿಚಾರಣೆಗೆ ಕರೆದಿದ್ದಾರೆ ಎನ್ನಲಾಗಿದೆ.

ದೊಡ್ಡಬಳ್ಳಾಪುರ ಬಳಿಯ ತಮ್ಮ ಸನ್ ಶೈನ್ ರೆಸಾರ್ಟ್ ನಲ್ಲಿ ಅಕುಲ್ ಬಾಲಾಜಿ ಪಾರ್ಟಿ ಗಳನ್ನು ಆಯೋಜಿಸುತ್ತಿದ್ದರು. ಈ ಪಾರ್ಟಿಯಲ್ಲಿ ಅಗತ್ಯ ಇದ್ದವರಿಗೆ ರಾಹುಲ್ ಹಾಗೂ ವಿರೇನ್ ಖನ್ನಾರಿಂದ ಡ್ರಗ್ಸ್ ಪೂರೈಕೆ ಮಾಡಲಾಗುತ್ತಿತ್ತು. ನಟ-ನಟಿಯರಿಗೆ ಹಾಗೂ ಅವರ ಪತ್ನಿಯರಿಗೆ ಜ್ಯೂಸ್ ನಲ್ಲಿ ಡ್ರಗ್ಸ್ ಬೆರೆಸಿ ನೀಡಲಾಗುತ್ತಿತ್ತು. ಒಂದು ಎಂಡಿಎಂ ಮಾತ್ರೆಯನ್ನು ನಾಲ್ಕು ಜನರಿಗೆ ಶೇರ್ ಮಾಡಿ ನೀಡಲಾಗುತ್ತಿತ್ತು ಎಂಬ ಗುಮಾನಿ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ.

ಈ ರೆಸಾರ್ಟ್ ನಲ್ಲಿ ಪೇಜ್ 3 ಪಾರ್ಟಿಗಳನ್ನು ಕೂಡ ಅಕುಲ್ ಆಯೋಜಿಸುತ್ತಿದ್ದರು ಎನ್ನಲಾಗಿದೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಏ.20ರಂದು ಸನ್ ಶೈನ್ ರೆಸಾರ್ಟ್ ನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಲಾಗಿತ್ತು. ಈ ಬಗ್ಗೆ ಸ್ಥಳೀಯರೊಬ್ಬರು ದೊಡ್ಡಬಳ್ಳಾಪುರ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...