alex Certify ಅಂತೂ ಆರ್ಯುವೇದದಲ್ಲಿ ಕೊರೊನಾಗೆ ಸಿಕ್ಕೇ ಬಿಡ್ತಾ ಔಷಧ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತೂ ಆರ್ಯುವೇದದಲ್ಲಿ ಕೊರೊನಾಗೆ ಸಿಕ್ಕೇ ಬಿಡ್ತಾ ಔಷಧ…?

ಕೊರೊನಾ ಮಹಾಮಾರಿ ಮನುಕುಲವನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಈ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಕರ್ನಾಟದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15 ಸಾವಿರ ದಾಟಿದೆ. ಇನ್ನು ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ರಣಕೇಕೆ ಹೆಚ್ಚಾಗಿದೆ. ಈ ಬೆನ್ನಲ್ಲೇ ಇದೀಗ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ.

ಹೌದು, ಕೊರೋನಾ ವೈರಸ್‌ಗೆ ಆರ್ಯುವೇದದಲ್ಲಿ ಔಷಧ ಇದೆ ಎಂದು ಹೇಳಿದ್ದರು ಆರ್ಯುವೇದ ತಜ್ಞ ಡಾ. ಗಿರಿಧರ್ ಕಜೆ. ಜೊತೆಗೆ ಇದನ್ನು ಪ್ರಯೋಗ ಮಾಡಲು ಅನುಮತಿಯನ್ನೂ ಕೇಳಿದ್ದರು. ಈ ಅನುಮತಿ ಸಿಕ್ಕ ನಂತರ ಪ್ರಯೋಗಕ್ಕೆ ಮುಂದಾಗಿದ್ದರು. ಇದೀಗ ಈ ಪ್ರಯೋಗ ಸಕ್ಸಸ್ ಆಗಿದೆಯಂತೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದರ ಪ್ರಯೋಗ ನಡೆದಿದೆ. 23 ವರ್ಷದಿಂದ 65 ವರ್ಷದವರೆಗಿನ ಕೊರೊನಾ ರೋಗಿಗಳಿಗೆ ಈ ಚಿಕಿತ್ಸೆ ನೀಡಲಾಗಿತ್ತು. ಖುಷಿ ಸಂಗತಿಯೆಂದರೆ ಈ ಔಷಧದಿಂದ ಕೇವಲ ಎರಡರಿಂದ ನಾಲ್ಕು ದಿನಗಳಲ್ಲಿ ಸೋಂಕಿತರಿಗಿದ್ದ ಲಕ್ಷಣಗಳು ಮಾಯವಾಗಿವೆ. ಹಾಗೂ 3-9 ದಿನಗಳಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗಟಿವ್ ಬಂದಿದೆ ಎನ್ನಲಾಗುತ್ತಿದೆ. ಒಟ್ನಲ್ಲಿ ಈ ಪ್ರಯೋಗ ಇದೀಗ ಯಶಸ್ವಿಯಾಗಿದೆ ಎನ್ನಲಾಗ್ತಿದೆ. ಮುಂದಿನ ಹಂತದ ಪ್ರಯೋಗ ಹಾಗೂ ಅನುಮತಿ ಸಿಕ್ಕು ರೋಗಿಗಳು ಗುಣಮುಖರಾದರೆ ಕೊರೊನಾಗೆ ಔಷಧ ಸಿಕ್ಕಂತೆಯೇ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...