ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕಿಯರಿಗೆ ಸರ್ಕಾರ ಈ ಹಿಂದೆ ಭರವಸೆ ನೀಡಿದಂತೆ ಮೊಬೈಲ್ ಫೋನ್ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಈ ಮೊಬೈಲ್ ಮೂಲಕ ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳು, ಗರ್ಭಿಣಿಯರು, ಹಾಲೂಣಿಸುವ ತಾಯಂದಿರು, ನವಜಾತ ಶಿಶುಗಳ ಪೋಷಣೆ ಮುಂತಾದ ವಿವರಗಳನ್ನು ಅಪ್ಲೋಡ್ ಮಾಡಲು ಅನುಕೂಲವಾಗಲಿದೆ.
ಅಪೌಷ್ಟಿಕತೆ, ರಕ್ತಹೀನತೆ, ಶಿಶು ಮರಣ ಮತ್ತು ತಾಯಿ ಮರಣ ಪ್ರಮಾಣ ನಿಯಂತ್ರಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದ್ದು, ಮೊಬೈಲ್ ನಲ್ಲಿ ಅಪ್ಲೋಡ್ ಮಾಡಲಾದ ವಿವರವನ್ನು ಪರಿಶೀಲಿಸುವ ಮೂಲಕ ಅಗತ್ಯವಿದ್ದವರಿಗೆ ನೆರವು ನೀಡಲಾಗುತ್ತದೆ.