ಕೊರೊನಾ ಕರಿನೆರಳು ಎಲ್ಲಾ ವಲಯಗಳು, ಕಾರ್ಯಕ್ರಮಗಳು, ಸಾವು ಹೀಗೆ ಎಲ್ಲದರ ಮೇಲೂ ಬಿದ್ದಿದೆ. ಸಾವಿಗೆ ಇಂತಿಷ್ಟೆ ಜನ ಸೇರಬೇಕು, ಮದುವೆಗೆ ಕೇವಲ 50 ಮಂದಿ ಇರಬೇಕು ಎಂಬ ನಿಯಮ ಪಾಲನೆಯಾಗುತ್ತಿದೆ. ಇನ್ನು ಸರ್ಕಾರದ ಅನೇಕ ಯೋಜನೆಗಳಿಗೂ ಇದರ ಎಫೆಕ್ಟ್ ತಟ್ಟಿದೆ.
ಹೌದು, ಸಪ್ತಪದಿ ಯೋಜನೆಯಲ್ಲಿ ಹಸೆಮಣೆ ಏರಲು ಮುಂದಾಗಿದ್ದವರಿಗೆ ಕೊರೊನಾ ಶಾಕ್ ಕೊಟ್ಟಿದೆ. ಸರ್ಕಾರದ ಮಹತ್ವದ ಯೋಜನೆಯಲ್ಲಿ ಒಂದಾದ ಸಪ್ತಪದಿ ಯೋಜನೆ ಈ ಬಾರಿ ನಡೆಯುವುದೇ ಡೌಟ್ ಎನ್ನಲಾಗುತ್ತಿದೆ. ಕೊರೊನಾದಿಂದಾಗಿ ಸಪ್ತಪದಿ ಕಾರ್ಯಕ್ರಮವನ್ನು ಕೈಬಿಡಲು ಸರ್ಕಾರ ಚಿಂತನೆ ನಡೆಸಿದೆ.
ಇನ್ನು ಈ ವರ್ಷದ ಸಪ್ತಪದಿ ಮದುವೆ ಕಾರ್ಯಕ್ರಮ ಏಪ್ರಿಲ್ ತಿಂಗಳಲ್ಲಿ ನಿಗದಿಯಾಗಿತ್ತು. ಆದರೆ ಕೊರೊನಾದಿಂದಾಗಿ ಜುಲೈ – ಆಗಸ್ಟ್ ನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಇದೀಗ ಈ ತಿಂಗಳಲ್ಲೇ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿರೋದ್ರಿಂದ ಈಗಲೂ ಸಾಮೂಹಿಕ ವಿವಾಹ ನಡೆಯುವುದು ಬಹುತೇಕ ಡೌಟಾಗಿದೆ. ಹೀಗಾಗಿ ಸಾಮೂಹಿಕ ವಿವಾಹದಲ್ಲಿ ಸಪ್ತಪದಿ ತುಳಿಯಲು ರೆಡಿಯಾಗಿದ್ದ ಜೋಡಿಗಳಿಗೆ ನಿರಾಸೆಯಾಗಿದೆ.