ಕೊರೊನಾದಿಂದಾಗಿ ಕಳೆದ ನಾಲ್ಕೈದು ತಿಂಗಳು ಸ್ಥಗಿತಗೊಂಡಿದ್ದ ಮೆಟ್ರೋ ಸಂಚಾರ ಮತ್ತೆ ಪುನರಾರಂಭಗೊಂಡಿದೆ. ಲಾಕ್ ಡೌನ್ ಸಡಿಲಿಕೆ ಮಾಡಿದ್ದರಿಂದ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಹೀಗಾಗಿ ಒಂದಿಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಮೆಟ್ರೋ ಸಂಚಾರ ಆರಂಭಿಸಲಾಗಿದೆ. ಆದರೆ ಇದೀಗ 27, 28 ರಂದು ಮತ್ತೆ ಮೆಟ್ರೋ ಸಂಚಾರದಲ್ಲಿ ವ್ಯತ್ಯವಾಗಲಿದೆ. ಹಾಗಾದ್ರೆ ಯಾವ ಮಾರ್ಗದಲ್ಲಿ ವ್ಯತ್ಯಯ ಅನ್ನೋದನ್ನ ಮುಂದೆ ಓದಿ.
ಹೌದು, ಇದೇ ತಿಂಗಳ 27ರ ಮತ್ತು 28ರಂದು ಹಸಿರು ಮಾರ್ಗದ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ನಮ್ಮ ಮೆಟ್ರೋ 2ನೇ ಹಂತದಲ್ಲಿ ಯಲಚೇನಹಳ್ಳಿಯಿಂದ ಅಂಜನಾಪುರ ಮಾರ್ಗದಲ್ಲಿ ಮೆಟ್ರೋ ಸಂಚಾರ ಮಾಡಲಿದೆ. ಹೀಗಾಗಿ ಮೆಟ್ರೋ ರೈಲು ಹಾಗೂ ಅಲ್ಲಿನ ಸಿಸ್ಟಂ ಪರೀಕ್ಷೆ ಅನಿವಾರ್ಯವಾಗಿದ್ದು, ಈ ಕಾರ್ಯವನ್ನು ಮಾಡಲಾಗುತ್ತಿದೆ. ಹೀಗಾಗಿ ಎರಡು ದಿನ ಮೆಟ್ರೋ ರೈಲು ಆರ್.ವಿ. ರಸ್ತೆಯಿಂದ ಯಲಚೇನಹಳ್ಳಿವರೆಗಿನ ಸೇವೆಯಲ್ಲಿ ವ್ಯತ್ಯಯವಾಗುತ್ತದೆ.
ಇನ್ನು ಈ ಎರಡು ದಿನ ನಾಗಸಂದ್ರದಿಂದ ಆರ್.ವಿ. ರಸ್ತೆ ನಿಲ್ದಾಣದವರೆಗೆ ಮಾತ್ರ ರೈಲು ಸೇವೆ ಇರುತ್ತದೆ. ಇತ್ತ ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿ ಮಾರ್ಗದಲ್ಲಿ ಮೆಟ್ರೋ ಸೇವೆ ಇರುತ್ತದೆ. ನೀವೇನಾದರೂ ಹಸಿರು ಮಾರ್ಗದಲ್ಲಿ ಸಂಚಾರ ಮಾಡುವವರಾಗಿದ್ದರೆ ಆ ಭಾಗದಲ್ಲಿ ಮೆಟ್ರೋ ಸೇವೆ ಎಲ್ಲಿಂದ ಎಲ್ಲಿಯವರೆಗಿದೆ ಅನ್ನೋದನ್ನು ತಿಳಿದರೆ ಉತ್ತಮ.