ಮಲೆನಾಡಿನ ರಮಣೀಯ ತಾಣಗಳಲ್ಲಿ ಕೊಡಚಾದ್ರಿ ಗಿರಿ ಕೂಡ ಒಂದು. ರಾಜ್ಯದ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಕೊಡಚಾದ್ರಿ ಹೆಚ್ಚಿನ ಮಹತ್ವ ಪಡೆದಿದೆ. ಈ ಕೊಡಚಾದ್ರಿಗೆ ಹೋಗುವುದೇ ದೊಡ್ಡ ಸಾಹಸ ಅಂದರೆ ತಪ್ಪಾಗಲಿಕ್ಕಿಲ್ಲ.
ಇಲ್ಲಿಗೆ ಹೋಗಲಿಕ್ಕೆ ರಸ್ತೆ ಇದ್ದರೂ ಅದು ಅತ್ಯಂತ ದುರ್ಗಮವಾಗಿದೆ. ಹೀಗಾಗಿ ಕಡಿಮೆ ಸಮಯದಲ್ಲಿ ಹೋಗಬೇಕಾದವರು ರಸ್ತೆ ಕಡಿದಾಗಿರೋದ್ರಿಂದ ಹೆಚ್ಚಿನ ಸಮಯ ವ್ಯಯವಾಗುತ್ತಿತ್ತು.
ಆದರೆ ಇದೀಗ ಕೊಲ್ಲೂರಿಂದ ಕೊಡಚಾದ್ರಿ ಬೆಟ್ಟದ ತುದಿಗೆ ಹೋಗಲು ಕೇವಲ 11 ರಿಂದ 15 ನಿಮಿಷ ಸಾಕು. ಹೌದು, ಈಗ ಕೇಬಲ್ ಕಾರ್ ಸಂಪರ್ಕದಿಂದ ಇದು ಸಾಧ್ಯವಾಗುತ್ತಿದೆ. ಬಿ.ವೈ.ರಾಘವೇಂದ್ರ ಅವರ ಕನಸಿನ ಕೂಸಾದ ಮಹತ್ವಕಾಂಕ್ಷಿ ಯೋಜನೆಗೆ ಇದೀಗ ಚಾಲನೆ ಸಿಕ್ಕಿದೆ.
ಇನ್ನು ಈ ಕೇಬರ್ ಕಾರ್ ಮೂಲಕ ರಮಣೀಯ ದೃಶ್ಯಗಳನ್ನು ಪ್ರವಾಸಿಗರು ನೋಡಬಹುದಾಗಿದೆ. ಅಷ್ಟೇ ಅಲ್ಲ ವಿಭಿನ್ನ ಅನುಭವ ಈ ಕೇಬಲ್ ಕಾರ್ ಜರ್ನಿಯಲ್ಲಿ ಪ್ರವಾಸಿಗರಿಗೆ ಸಿಗಲಿದೆ. ನೆಲಮಟ್ಟದಿಂದ 100 ಮೀಟರ್ ಎತ್ತರದಲ್ಲಿ ಈ ಕಾರು ಸಂಚರಿಸಲಿದ್ದು, ಇದರಿಂದ ಪರಿಸರಕ್ಕೂ ಹಾಗೂ ವನ್ಯ ಜೀವಿಗಳಿಗೂ ಯಾವುದೆ ತೊಂದರೆಯಾಗುವುದಿಲ್ಲ. ಈ ಯೋಜನೆ ನೆನೆಗುದಿಗೆ ಬೀಳದೆ ಆದಷ್ಟು ಬೇಗ ಕಾಮಗಾರಿ ಮುಗಿಯಲಿ ಅನ್ನೋದೆ ಎಲ್ಲರ ಆಶಯ.