alex Certify ʼಡ್ರಗ್ಸ್ ಸೇವಿಸಿ ಕಿರುಕುಳ ನೀಡುತ್ತಿದ್ದಾನೆʼ ಪತಿಯ ವಿರುದ್ಧ ಠಾಣೆ ಮೆಟ್ಟಿಲೇರಿದ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಡ್ರಗ್ಸ್ ಸೇವಿಸಿ ಕಿರುಕುಳ ನೀಡುತ್ತಿದ್ದಾನೆʼ ಪತಿಯ ವಿರುದ್ಧ ಠಾಣೆ ಮೆಟ್ಟಿಲೇರಿದ ಪತ್ನಿ

ಬೆಂಗಳೂರು: ಡ್ರಗ್ಸ್ ಸೇವಿಸಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಟೆಕ್ಕಿ ಪತಿಯ ವಿರುದ್ಧ ಪತ್ನಿಯೋರ್ವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತಿಯ ಡ್ರಗ್ಸ್ ಸೇವನೆಯ ವಿಡಿಯೋ ಸಮೇತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೋರಮಂಗಲದ ನಿವಾಸಿ ಲೋಹಿತ್ ವಿರುದ್ಧ ಪತ್ನಿ ದೂರು ನೀಡಿದ್ದು, ಪತಿ ಡ್ರಗ್ಸ್ ಸೇವನೆ ಮಾಡಿ ತನಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ತನಗೂ ಡ್ರಗ್ಸ್ ಸೇವಿಸುವಂತೆ ಬಲವಂತ ಮಾಡುತ್ತಿದ್ದಾನೆ ಎಂದು ಬೆಂಗಳೂರು ಪೂರ್ವ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಥಣೀಸಂದ್ರದಿಂದ ಪತಿ ಡ್ರಗ್ಸ್ ತರಿಸಿಕೊಳ್ಳುತ್ತಿದ್ದು, ಮನೆಯಲ್ಲಿಯೇ ಕುಳಿತು ಡ್ರಗ್ಸ್ ಸೇವನೆ ಮಾಡುತ್ತಾರೆ. ಪತಿ ಡ್ರಗ್ಸ್ ಸೇವಿಸಿ ನಶೆಯಲ್ಲಿ ತೇಲಾಡುವ ವಿಡಿಯೋವನ್ನು ಕೂಡ ಮಹಿಳೆ ಪೊಲೀಸರಿಗೆ ನೀಡಿದ್ದಾರೆ.

ಲೋಹಿತ್ ತಂದೆ ಕೃಷ್ಣಪ್ಪ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದು, ಲೋಹಿತ್ ತಂದೆ-ತಾಯಿಯೇ ಆತನ ವ್ಯಸನಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...