ಅಂತೂ ಆಗಸ್ಟ್ 5 ರಿಂದ ಅಂದರೆ ನಿನ್ನೆಯಿಂದ ಜಿಮ್ ಗಳು ಓಪನ್ ಆಗಿವೆ. ಅನ್’ಲಾಕ್ 3.0ದಲ್ಲಿ ಯೋಗ, ಜಿಮ್ ಸಂಸ್ಥೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಬೆನ್ನಲ್ಲೇ ಒಂದಿಷ್ಟು ಷರತ್ತುಗಳನ್ನು ಸರ್ಕಾರ ಹಾಕಿದೆ. ಹೊಸ ಮಾರ್ಗಸೂಚಿಯ ಪ್ರಕಾರವೇ ಜಿಮ್ ತೆರೆಯುವಂತೆ ಸರ್ಕಾರ ಸೂಚಿಸಿದೆ.
ಹೌದು, ಕಳೆದ ಮೂರ‍್ನಾಲ್ಕು ತಿಂಗಳುಗಳಿಂದ ಜಿಮ್ ಹಾಗೂ ಯೋಗ ಸಂಸ್ಥೆಗಳನ್ನು ಮುಚ್ಚಲಾಗಿತ್ತು. ಸೋಂಕಿನ ಭಯದಿಂದ ಇವುಗಳನ್ನು ತೆರೆಯೋದಿಕ್ಕೆ ಸರ್ಕಾರ ನಕಾರ ಮಾಡಿತ್ತು. ಆದರೆ ಇದೀಗ ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸ್ ಬಳಕೆಯನ್ನು ಕಡ್ಡಾಯಗೊಳಿಸಿ ಜಿಮ್ ಹಾಗೂ ಯೋಗ ಸೆಂಟರ್ ಗಳನ್ನು ತೆರೆಯೋದಿಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಲ್ಲಾ ಪ್ರದೇಶಗಳಲ್ಲಿ ಜಿಮ್ ತೆರೆಯಲು ಅವಕಾಶ ನೀಡಲಾಗಿದೆ. ಇನ್ನು ಎ.ಸಿ. ಬಳಸುವಂತಿಲ್ಲ. ಜಿಮ್ ಕೇಂದ್ರಗಳಲ್ಲಿ ಶುದ್ಧ ಗಾಳಿ ಬೀಸುವಂತಿರಬೇಕು. ಶೀತ, ಕೆಮ್ಮು, ಜ್ವರ ಸೇರಿದಂತೆ ಆರೋಗ್ಯದಲ್ಲಿ ಏರುಪೇರಾಗಿದ್ದರೆ ಜಿಮ್ ಗೆ ಪ್ರವೇಶ ಇಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಜೊತೆಗೆ ಜಿಮ್ ಬರುವ ಪ್ರತಿಯೊಬ್ಬರ ಮಾಹಿತಿ ಪಡೆಯಬೇಕು ಎಂದು ಜಿಮ್ ಮಾಲೀಕರಿಗೆ ಸರ್ಕಾರ ಸೂಚಿಸಿದೆ.