ಮಲೈ ಮಹದೇಶ್ವರ ಸ್ವಾಮಿ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ರ್ಯಾಪರ್ ಚಂದನ್ ಶೆಟ್ಟಿ ಅವರ ʼಕೋಲು ಮಂಡೆ ಜಂಗಮ ದೇವʼ ಹಾಡನ್ನು ಯುಟ್ಯೂಬ್ ನಿಂದ ಡಿಲಿಟ್ ಮಾಡಲಾಗಿದೆ.
ಜಾನಪದ ಭಕ್ತಿಗೀತೆ ಕೋಲು ಮಂಡೆ ಜಂಗಮ ದೇವ ಹಾಡನ್ನು ಚಂದನ್ ಶೆಟ್ಟಿ ತಮ್ಮದೇ ರ್ಯಾಪ್ ಶೈಲಿಯಲ್ಲಿ ಬಳಸಿಕೊಂಡು ವಿಡಿಯೋ ಸಾಂಗ್ ಮಾಡಿ ಯುಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದರು. ಈ ಹಾಡಿನಲ್ಲಿ ಶಿವಶರಣೆ ಸಂಕವ್ವಳನ್ನು ಅಶ್ಲೀಲವಾಗಿ ತೋರಿಸಲಾಗಿದೆ ಹಾಗೂ ಜನಪದ ಭಕ್ತಿಗೀತೆಯನ್ನು ಚಂದನ್ ಶೆಟ್ಟಿ ತಮ್ಮ ಲಾಭಕ್ಕಾಗಿ ರ್ಯಾಪ್ ಶೈಲಿಯಲ್ಲಿ ವಿಕೃತವಾಗಿ ಬಳಸಿಕೊಂಡಿದ್ದಾರೆ ಎಂದು ಮಾದೇಶ್ವರ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೇ ಯುಟ್ಯೂಬ್ ನಿಂದ ಕೋಲು ಮಂಡೆ ರ್ಯಾಪ್ ಸಾಂಗ್ ನ್ನು ಡಿಲಿಟ್ ಮಾಡಬೇಕು ಎಂದು ಆಗ್ರಹಿಸಿದ್ದರು. ಇದೀಗ ಆಕ್ರೋಶಿತರ ಒತ್ತಡಕ್ಕೆ ಮಣಿದು ಹಾಡನ್ನು ಬಿಡುಗಡೆ ಮಾಡಿದ್ದ ಆನಂದ್ ಆಡಿಯೋ ಯುಟ್ಯೂಬ್ ನಿಂದ ಹಾಡನ್ನು ಡಿಲಿಟ್ ಮಾಡಿದೆ.