ದೇಶ ಹಾಗೂ ರಾಜ್ಯದಲ್ಲಿ ಕೊರೊನಾ 2 ನೇ ಅಲೆ ಅಬ್ಬರಿಸುತ್ತಿದೆ. ಮತ್ತೆ ಕ್ವಾರಂಟೈನ್, ಸೀಲ್ ಡೌನ್, ಕರ್ಫ್ಯೂ, ಲಾಕ್ ಡೌನ್ ಕುರಿತ ಮಾತುಗಳು ಕೇಳಿ ಬರುತ್ತಿದೆ.
ಮೊದಲ ಅಲೆ ಸಂದರ್ಭದಲ್ಲಿ ತಿಂಗಳಾನುಗಟ್ಟಲೆ ಲಾಕ್ ಡೌನ್ ಘೋಷಿಸಿದ್ದ ಕಾರಣ ಬಹುತೇಕ ಎಲ್ಲರೂ ಆರ್ಥಿಕವಾಗಿ ತತ್ತರಿಸಿ ಹೋಗಿದ್ದರು. ಕೊರೊನಾ ಮುಗಿದೇ ಹೋಯಿತು ಎಂದು ಭಾವಿಸಿದ್ದವರಿಗೆ ಎರಡನೇ ಅಲೆ ಬರಸಿಡಿಲಿನಂತೆ ಅಪ್ಪಳಿಸಿದೆ.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕುಟುಂಬದ 8 ಮಂದಿಗೆ ಕೊರೋನಾ ಸೋಂಕು ದೃಢ
ಇದರ ಮಧ್ಯೆ ಏರುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆಯಲ್ಲಿನ ಹೆಚ್ಚಳ ಶ್ರೀ ಸಾಮಾನ್ಯರನ್ನು ಬೆಚ್ಚಿಬೀಳಿಸಿದೆ. ಈ ನಡುವೆ ಎಂದಿನಂತೆ ಸಾಂತ್ವನ ಹೇಳಲು ಜನ ಸಾಮಾನ್ಯರ ವೈದ್ಯ ಎಂದೇ ಹೆಸರಾಗಿರುವ ಡಾ. ರಾಜು ಕೃಷ್ಣಮೂರ್ತಿ ಮುಂದಾಗಿದ್ದಾರೆ.
ತಮ್ಮ ಈ ವಿಡಿಯೋದಲ್ಲಿ ಈ ಬಾರಿಯ ಕೊರೊನಾ ಕುರಿತಂತೆ ಡಾ. ರಾಜು ಅಮೂಲಾಗ್ರ ಮಾಹಿತಿ ನೀಡಿದ್ದು, ಅವರು ಹೇಳಿರುವ ಮಾತುಗಳು ಎಲ್ಲರಿಗೂ ಸಾಂತ್ವನ ನೀಡುತ್ತಿವೆ. ನೀವೂ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.