ರಾಜ್ಯಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಮಾಮೂಲಿ ಶೀತ, ಕೆಮ್ಮು, ಗಂಟಲು ನೋವು, ಜ್ವರ ಬಂದರೂ ಕೂಡ ಸೋಂಕಿನ ಭೀತಿ ಆರಂಭವಾಗಿದೆ. ರಸ್ತೆ ರಸ್ತೆಗಳಲ್ಲೂ ಕೋವಿಡ್ ಟೆಸ್ಟ್ ಹೆಸರಲ್ಲಿ ಸುಲಿಗೆಗಳೂ ನಡೆಯುತ್ತಿದೆ. ಈ ನಡುವೆ ಜನರಲ್ಲಿ ತಾವು ಕೊವಿಡ್ ಟೆಸ್ಟ್ ಮಾಡಿಸಬೇಕೇ ಬೇಡವೇ ಎಂಬ ಗೊಂದಲೂ ಎದುರಾಗಿದೆ ಈ ಎಲ್ಲಾ ವಿಚಾರಗಳ ಬಗ್ಗೆ ಡಾ. ರಾಜು ಮಾಹಿತಿ ನೀಡಿದ್ದಾರೆ.
ಡಾ. ರಾಜು ಅವರು ಈ ಹಿಂದೆಯೂ ಸಾಮಾಜಿಕ ಹಲವು ವಿಡಿಯೋಗಳನ್ನು ಹಾಕುವ ಮೂಲಕ ಕೊರೊನಾ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದು, ಇವರ ಧೈರ್ಯದ ಮಾತುಗಳನ್ನು ಕೇಳಿ ಜನ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕೊರೊನಾ ಟೆಸ್ಟ್ ಹೆಸರಲ್ಲಿ ಜನರಲ್ಲಿ ಸೋಂಕು ಇಲ್ಲದಿದ್ದರೂ ಇದೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಟೆಸ್ಟ್ ಹೆಸರಲ್ಲಿ ವೈದ್ಯರು, ಅನೇಕ ಲ್ಯಾಬ್ ಗಳು ಸುಲಿಗೆಗಿಳಿದಿದ್ದಾರೆ. ಸೋಂಕಿನ ಯಾವುದೇ ಲಕ್ಷಣಗಳಿಲ್ಲದಿದ್ದರೂ ಜನರು ಆತಂಕಕ್ಕೀಡಾಗಿ ಭಯಭೀತರಾಗಿ ಟೆಸ್ಟ್ ಗೆ ಒಳಪಡುವ ಮೊದಲು ಸ್ವಲ್ಪ ಜಾಗೃತರಾಗಿ ಎಚ್ಚೆತ್ತುಕೊಳ್ಳಬೇಕು ಎಂದು ಡಾ.ರಾಜು ತಿಳಿಸಿದ್ದಾರೆ.
ಕೊರೊನಾ ಟೆಸ್ಟ್ ನಿಮ್ಮಲ್ಲಿರುವ ವೈರಸ್ ನ್ನು ಪತ್ತೆ ಹಚ್ಚುತ್ತದೆ. ಸ್ವ್ಯಾಬ್ ಟೆಸ್ಟ್ ಮೂಲಕ ಆರ್ ಎನ್ ಎ ವೈರಸ್ ಕಂಡುಹಿಡಿಯಬಹುದಾಗಿದೆ. ಕೆಲವೆಡೆಗಳಲ್ಲಿ ಸೋಂಕಿನ ಗುಣಲಕ್ಷಣಗಳು ಕಂಡುಬಂದಿಲ್ಲ ಎಂದರೂ ಕೊವಿಡ್ ಟೆಸ್ಟ್ ಮಾಡಲಾಗುತ್ತಿದೆ. ಹಲವು ಆಸ್ಪತ್ರೆಗಳಲ್ಲಿ ಸುಲಿಗೆ ಮಾಡಲಾಗುತ್ತಿದೆ. ಪಾಸಿಟಿವ್ ಬಂದ ರೋಗಿಗಳಿಗೆ ಲಕ್ಷಾಂತರ ರೂ. ಬಿಲ್ ನ್ನು ಪಿಪಿಇ ಕಿಟ್ ಹೆಸರಲ್ಲಿ ವಸೂಲಿ ಮಾಡಲಾಗುತ್ತಿದೆ. ಆದರೆ ಕೋವಿಡ್ ಮೆಡಿಸಿನ್ ಗಾಗಿ ಬಿಲ್ ಮಾಡಲಾಗುತ್ತಿಲ್ಲ. ಈ ಮೂಲಕ ಜನರನ್ನು ದಾರಿತಪ್ಪಿಸುವ ಕೆಲಸ ನಡೆಯುತ್ತಿದೆ. ಹೀಗಾಗಿ ಜನರು ಸ್ವಲ್ಪ ಜಾಗೃತರಾಗಬೇಕು ಎಂದು ತಿಳಿಸಿದ್ದಾರೆ.
ಕೊರೊನಾ ಟೆಸ್ಟ್ ಮಾಡುವ ನೆಪದಲ್ಲಿ ಲ್ಯಾಬ್ ಗಳಿಂದ ಹಾಗೂ ಕೆಲ ಆಸ್ಪತ್ರೆಗಳಿಂದ ಸುಲಿಗೆ ದಂಧೆ ನಡೆಯುತ್ತಿದೆ. ಕೆಲವೆಡೆ ಉಚಿತ ಟೆಸ್ಟ್ ಮಾಡಲಾಗುತ್ತಿದೆ. ರಸ್ತೆಗಳಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತಿದೆ. ಇನ್ನು ಕೆಲವೆಡೆ ಮಾರ್ಕೆಟ್ ನಲ್ಲಿ ಹೋಗುತ್ತಿರುವವರನ್ನು ಬಲವಂತವಾಗಿ ಕರೆದು ಟೆಸ್ಟ್ ಮಾಡಲಾಗುತ್ತಿದೆ. ಇನ್ನು ಹಲವೆಡೆ ಖಾಸಗಿ ಲ್ಯಾಬ್ ಗಳ ವರದಿಯನ್ನು ಕೆಲ ಆಸ್ಪತ್ರೆ ವೈದ್ಯರು ನಂಬುವುದಿಲ್ಲ ಇದೇ ಕಾರಣಕ್ಕೆ ಮತ್ತೊಮ್ಮೆ ತಮ್ಮಲ್ಲೇ ಟೆಸ್ಟ್ ಮಾಡಿಸಬೇಕು ಎಂದು ವೈದ್ಯರು ಪಟ್ಟು ಹಿಡಿಯುತ್ತಿದ್ದಾರೆ. ಈ ಮೂಲಕ ಜನರಿಂದ ಹಣ ವಸೂಲಿ ನಡೆಯುತ್ತಿದೆ.
ಜನರು ಒಂದು ವಿಷಯ ಅಥಮಾಡಿಕೊಳ್ಳಬೇಕು. ಕೊರೊನಾ ವೈರಸ್ ಗೆ ಯಾವುದೇ ಟ್ರೀಟ್ ಮೆಂಟ್ ಇಲ್ಲ. ಇದೊಂದು ರೀತಿಯ ವೈರಸ್. ಇದಕ್ಕೆ ಆಸ್ಪತ್ರೆಗೆ ಹೋಗಿ ಲಕ್ಷಾಂತರ ರೂ. ಖರ್ಚು ಮಾಡಬೇಕಿಲ್ಲ. ಜನರೇ ಮುಂಜಾಗೃತೆ ವಹಿಸಿ ಮನೆಯಲ್ಲೇ ಇದ್ದು ಸಾಮಾಜಿಕ ಮತ್ತು ದೈಹಿಕ ಅಂತರ ಕಾಪಾಡಿಕೊಂಡು ಗುಣಪಡಿಸಿಕೊಳ್ಳಬಹುದಾಗಿದೆ.
ಸರ್ಕಾರ ಹಾಗೂ ವೈದ್ಯರುಗಳಿಗೂ ಗೊತ್ತು. ಕೊರೊನಾ ಸೋಂಕು ವ್ಯಾಪಕವಾಗಿ ಸಮುದಾಯಕ್ಕೆ ಹರಡಿದೆ ಎಂಬುದು. ಕ್ವಾರಟೈನ್ ಮಾಡುವುದರಿಂದ, ರಸ್ತೆ ರಸ್ತೆಗಳಲ್ಲಿ ಟೆಸ್ಟ್ ಮಾಡುವುದರಿಂದ ಕೊರೊನಾ ಚೈನ್ ಲಿಂಕ್ ಕಟ್ ಮಾಡುವುದಾಗಿ ಹೇಳುತ್ತಿರುವುದು ಸುಳ್ಳು. ಸಮುದಾಯಕ್ಕೆ ಹರಡಿರುವ ವೈರಸ್ ಚೈನ್ ಲಿಂಕ್ ಕಟ್ ಮಾಡುವುದು ಸಾಧ್ಯವಿಲ್ಲ. ಹಾಗಾಗಿ ಜನರೇ ಎಚ್ಚೆತ್ತುಕೊಂಡು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
https://www.facebook.com/106521611130177/posts/138862851229386/?sfnsn=wiwspwa&extid=vzZ4n9Wbn0UF2s9U&d=w&vh=e