ಕೊರೊನಾ ಮಹಾಮಾರಿಯ ಕರಿ ಛಾಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾದಿಂದ ಸಾಯುವವರ ಸಂಖ್ಯೆಯಲ್ಲೂ ಕೂಡ ಹೆಚ್ಚಾಗಿದೆ. ಇದರ ಜೊತೆಗೆ ಈ ಕೊರೊನಾ ಯಾವಾಗ ಕೊನೆಯಾಗುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಇದರ ಮಧ್ಯೆ ಜನವರಿ ವೇಳೆಗೆ ಸೋಂಕಿತರ ಸಂಖ್ಯೆಯಲ್ಲಿ ಇನ್ನೂ ಏರಿಕೆಯಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೌದು, ಕೊರೊನಾ ಮುನ್ಸೂಚನೆ ನೀಡುವ ಸಲುವಾಗಿ ವಿಶ್ಲೇಷಣೆಯನ್ನು ಗಣಿತ ವಿಜ್ಞಾನದ ಅನೇಕ ವಿಧಾನಗಳನ್ನು ಬಳಸಿ ಅಧ್ಯಯನಗಳನ್ನು ಮಾಡಲಾಗಿದೆ. ಈ ಅಧ್ಯಯನಗಳ ಪ್ರಕಾರ ಮುಂದಿನ ವರ್ಷ ಅಂದರೆ 2021ರ ಜನವರಿ ವೇಳೆಗೆ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ. ಶೇ.50 ರಷ್ಟು ಸೋಂಕಿತರು ಸೋಂಕಿಗೆ ತುತ್ತಾಗಬಹುದು ಎಂದು ಹೇಳಲಾಗುತ್ತಿದೆ.
ಇನ್ನು ನಮ್ಮ ರಾಜ್ಯದಲ್ಲಿ ಒಬ್ಬ ಸೋಂಕಿತನಿಂದ ಎಷ್ಟು ಜನರಿಗೆ ಸೋಂಕು ಹರಡುತ್ತಿದೆ ಎಂಬುದೇ ಇನ್ನೂ ನಿಗೂಢವಾಗಿದೆಯಂತೆ. ಬೇರೆ ಬೇರೆ ದೇಶಗಳಲ್ಲಿ ಒಬ್ಬ ಸೋಂಕಿತನಿಂದ 10 ಹಾಗೂ 25 ಜನರಿಗೆ ಸೋಂಕು ಹರಡುತ್ತಿದೆ ಎನ್ನಲಾಗಿದೆ. ವಿಜ್ಞಾನಿಗಳ ಪ್ರಕಾರ ಮುಂದಿನ ವರ್ಷ ಏಪ್ರಿಲ್ ವೇಳೆಗೆ ಲಸಿಕೆ ಲಭ್ಯವಾಗಬಹುದು ಎಂದು ಊಹಿಸಲಾಗಿದೆ.