ಆನೆಗುಡ್ಡೆ ವಿನಾಯಕ ದೇವಸ್ಥಾನ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರ. ಇಲ್ಲಿ ಪ್ರತಿದಿನ ಸಾವಿರಾರು ಭಕ್ತಾದಿಗಳು ವಿನಾಯಕನ ದರ್ಶನವನ್ನು ಪಡೆಯುತ್ತಾರೆ. ಈ ಕ್ಷೇತ್ರವು ಪರಶುರಾಮ ಮಹರ್ಷಿಯ ಸೃಷ್ಟಿಯೆಂದು ಹೇಳಲಾಗಿದೆ.
ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ.
ದೇವಸ್ಥಾನದಲ್ಲಿರುವ ವಿನಾಯಕನ ಮೂರ್ತಿಯು ನಿಂತಿರುವ ಭಂಗಿಯಲ್ಲಿದ್ದು ಭಕ್ತಾದಿಗಳಿಗೆ ಇಷ್ಟಾರ್ಥವನ್ನು ದಯಪಾಲಿಸುತ್ತಾನೆ. ಮೂರ್ತಿಯ ನಾಲ್ಕು ಹಸ್ತದಲ್ಲಿ ಎರಡು “ವರದ ಹಸ್ತ”ವು ಭಕ್ತರು ಬೇಡಿದ ವರಗಳನ್ನು ಕೊಡಲೂ, ಇನ್ನೆರೆಡು ಹಸ್ತವು ಶರಣಾಗತಿಯನ್ನು ತೋರಿಸುತ್ತದೆ.
ಗಣೇಶ ಚರ್ತುಥಿಯನ್ನು ಇಲ್ಲಿ ಮುಖ್ಯವಾಗಿ ಆಚರಿಸುತ್ತಾರೆ. ಪ್ರತಿ ಹುಣ್ಣಿಮೆಯ ನಂತರದ ಚೌತಿಯಂದು ವಿಶೇಷ ಪೂಜೆ ಇರುತ್ತದೆ. ಇದು ಉಡುಪಿಯಿಂದ 32 ಕಿ.ಮೀ ಹಾಗೂ ಕುಂದಾಪುರದಿಂದ 9 ಕಿ.ಮೀ ದೂರದಲ್ಲಿದೆ.