ಬೆಂಗಳೂರು: ಇನ್ಮುಂದೆ ರಾಜ್ಯದ ಪ್ರತಿ ದೇವಾಲಯಗಳ ಪ್ರಸಾದ ಮನೆ ಬಾಗಿಲಿಗೆ ಬಂದು ತಲುಪಲಿದೆ. ಇಂತದ್ದೊಂದು ವಿನೂತನ ಯೋಜನೆಯನ್ನು ಜಾರಿಗೊಳಿಸಲು ಮುಜರಾಯಿ ಇಲಾಖೆ ಮುಂದಾಗಿದೆ.
ತಂತ್ರಜ್ಞಾನದ ಮೂಲಕ ಈಗಾಗಲೇ ಆನ್ ಲೈನ್ ಸೇವೆ, ಆನ್ ಲೈನ್ ಬುಕ್ಕಿಂಗ್ ಜಾರಿಯಾಗಿದೆ. ಇದೇ ರೀತಿ ಭಕ್ತರ ಪ್ರತಿ ಮನೆಗೂ ಪ್ರಸಾದಗಳನ್ನು ತಲುಪಿಸುವ ನಿಟ್ಟಿನಲ್ಲಿ ಡೋರ್ ಡೆಲಿವರಿ ಯೋಜನೆ ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಕರ್ನಾಟಕದಾದ್ಯಂತ ಇರುವ ಯಾವುದೇ ದೇವಸ್ಥಾನದ ಪ್ರಸಾದಕ್ಕೆ ಭಕ್ತರು ಆನ್ ಲೈನ್ ಮೂಲಕ ಬುಕ್ ಮಾಡಿದರೆ ಸಾಕು. ಪ್ರಸಾದ ಮನೆ ಬಾಗಿಲಿಗೆ ಬಂದು ತಲುಪುತ್ತದೆ. ಶೀಘ್ರದಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, ಈಗಾಗಲೇ ಅಂಚೆ ಇಲಾಖೆ ಜೊತೆಗೂ ಮಾತುಕತೆ ನಡೆದಿದೆ.
ಪ್ರಸಾದದ ದರ ಹಾಗೂ ಡೆಲಿವರಿ ದರ ಸೇರಿಸಿ ಮನೆ ಬಾಗಿಲಿಗೆ ಪ್ರಸಾದ ನೀಡುವ ದರ ಫಿಕ್ಸ್ ಮಾಡಲು ಅಂಚೆ ಇಲಾಖೆ ಕೂಡ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.