ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಣ ಮಂಡಳಿಯು ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗೆ ದಿನಾಂಕ ನಿಗದಿ ಮಾಡಿದೆ.
ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಅಭ್ಯರ್ಥಿಗಳು ಮಂಡಳಿಯ ಅಧಿಕೃತ ವೆಬ್ಸೈಟ್ sslc.karnataka.gov.in.ನಲ್ಲಿ ಪರಿಶೀಲಿಸಬಹುದಾಗಿದೆ.
ಪೂರಕ ಪರೀಕ್ಷೆಯು ಸೆಪ್ಟೆಂಬರ್ 27 ಹಾಗೂ 29ರಂದು ನಡೆಯಲಿದೆ. ಮೊದಲ ದಿನದ ಪರೀಕ್ಷೆಯು 2 ಪಾಳಿಗಳಲ್ಲಿ ನಡೆಯಲಿದೆ.
ಬೆಳಗ್ಗೆ 10:30ರಿಂದ ಮಧ್ಯಾಹ್ನ 1:30 ಮೊದಲ ಪಾಳಿ ಹಾಗೂ ಮಧ್ಯಾಹ್ನ 2:30ರಿಂದ ಸಂಜೆ 5ರವರೆಗೆ ಎರಡನೆ ಪಾಳಿ ನಡೆಯಲಿದೆ. ಒಂದು ದಿನ ಕೋರ್ ವಿಷಯಗಳ ಪರೀಕ್ಷೆ ಹಾಗೂ ಇನ್ನೊಂದು ದಿನ ಭಾಷಾ ವಿಷಯಗಳಿಗೆ ಪರೀಕ್ಷೆ ಇರಲಿದೆ. ಜೆಟಿಎಸ್ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 30ರಂದು ಆಯಾ ಶಾಲೆಗಳಲ್ಲಿ ಪರೀಕ್ಷೆ ನಡೆಯಲಿದೆ. ಸೆಪ್ಟೆಂಬರ್ 28ರಂದು ಯಾವುದೇ ಪರೀಕ್ಷೆ ಇರುವುದಿಲ್ಲ.
ಹಿಂದೂಸ್ತಾನಿ ಸಂಗೀತ/ ಕರ್ನಾಟಕ ಸಂಗೀತ ಮೌಖಿಕ ಪರೀಕ್ಷೆಯು ಸೆಪ್ಟೆಂಬರ್ 27ರಂದು ಮಧಾಹ್ಯ 2:30ರಿಂದ ಸಂಜೆ4 ಗಂಟೆವರೆಗೆ ನಡೆಯಲಿದೆ. ದಿವ್ಯಾಂಗ ಅಭ್ಯರ್ಥಿಗಳಿಗೆ 15 ನಿಮಿಷ ಹೆಚ್ಚುವರಿ ಸಮಯಾವಕಾಶ ಲಭ್ಯವಾಗಲಿದೆ.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಣ ಮಂಡಳಿಯು ಆಗಸ್ಟ್ 9ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಿಸಿತ್ತು. ಈ ಬಾರಿ ರಾಜ್ಯದಲ್ಲಿ 99.9 ಪ್ರತಿಶತ ಫಲಿತಾಂಶ ದಾಖಲಾಗಿದೆ. ಈ ವರ್ಷ ಸರಿ ಸುಮಾರು 8 ಲಕ್ಷ ಮಂದಿ 10ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದರು.