ಬೆಂಗಳೂರು: 2022 ರ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶವನ್ನು ಇದೇ ವಾರದಲ್ಲಿ ಬಿಡುಗಡೆಗೊಳಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕೇವಲ ಎರಡು ಮೂರು ದಿನಗಳಲ್ಲಿ ಫಲಿತಾಂಶ ಪ್ರಕಟವಾಗಬಹುದು ಎಂದು ಹೇಳಿರುವ ಮಂಡಳಿ ಫಲಿತಾಂಶದ ದಿನಾಂಕವನ್ನು ಇದುವರೆಗೆ ಪ್ರಕಟಿಸಿಲ್ಲ.
‘ನಿಗೂಢ ಸನ್ನಿವೇಶದಲ್ಲಿ ನಾನು ಸತ್ತರೆ…….’: ಗೊಂದಲ ಮೂಡಿಸಿದ ಎಲಾನ್ ಮಸ್ಕ್ ಟ್ವೀಟ್
ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ 2022 ಮೇ 14ರೊಳಗೆ ಬಿಡುಗಡೆಯಾಗುವ ಸಾಧ್ಯತೆಯಿದೆ ಮತ್ತು karresults.nic.in ಮತ್ತು sslc.karnataka.gov.in. ಈ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಲಭ್ಯವಿರಲಿದೆ ಎಂದು ಹೇಳಿದೆ.
ಕೋವಿಡ್ ನಿಂದಾಗಿ ತೊಡಕಾಗಿದ್ದ ಎಸ್‌ಎಸ್‌ಎಲ್‌ಸಿ ಈ ವರ್ಷ ಯಾವುದೇ ಅಡೆತಡೆಯಿಲ್ಲದೇ ನಡೆದಿದ್ದು, 2022 ರ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಮಾರ್ಚ್ 28, 2022 ರಿಂದ ಏಪ್ರಿಲ್ 11, 2022 ರವರೆಗೆ ರಾಜ್ಯದ 3440 ಕೇಂದ್ರಗಳಲ್ಲಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.