ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ “2023-24ನೇ ಸಾಲಿನ ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ” ನೀಡಿ ಪುರಸ್ಕೃರಿಸಲು ಪಟ್ಟಿಯನ್ನು ಪ್ರಕಟಿಸಿದೆ.
ಗೌರವ ಪ್ರಶಸ್ತಿ ವಿಭಾಗ:(ಹಿಂದೂಸ್ಥಾನಿ ಸಂಗೀತ)- ಗಾಯನದಲ್ಲಿ ಬಳ್ಳಾರಿಯ ಡಿ.ಕುಮಾರ್ ದಾಸ್ ಮತ್ತು ಸುಗಮ ಸಂಗೀತದಲ್ಲಿ ರಾಯಚೂರಿನ ಅಂಬಯ್ಯ ನುಲಿ.
ವಾರ್ಷಿಕ ಪ್ರಶಸ್ತಿ ವಿಭಾಗ:(ಕರ್ನಾಟಕ ಸಂಗೀತದಲ್ಲಿ)– ಬೆಂಗಳೂರಿನ ಪದ್ಮ ಗುರುದತ್ -ಹಾಡುಗಾರಿಕೆ, ಮೈಸೂರಿನ ರೇವತಿ ಕಾಮತ್ – ವೀಣೆ, ಕೋಲಾರದ ವಿ.ರಮೇಶ್ – ನಾದಸ್ವರ ಮತ್ತು ಮಂಗಳೂರಿನ ಕದ್ರಿ ರಮೇಶ್ ನಾಥ್ – ಸ್ಯಾಕ್ಸೋಪೋನ್.
ಹಿಂದೂಸ್ಥಾನಿ ಸಂಗೀತ: ಕೊಪ್ಪಳದ ವಿರೂಪಾಕ್ಷ ರೆಡ್ಡಿ ಓಣಿಮನಿ-ಗಾಯನ, ಧಾರವಾಡದ ಶಫಿಖಾನ್ – ಸಿತಾರಾ ಮತ್ತು ಹುಬ್ಬಳ್ಳಿಯ ಸತೀಶ್ ಹಂಪಿಹೋಳಿ – ತಬಲದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನೃತ್ಯ ವಿಭಾಗ: ಬೆಂಗಳೂರಿನ ಸವಿತಾ ಅರುಣ, ಮಾಲಾ ಶಶಿಕಾಂತ್, ಒಡಿಸ್ಸಿಯ ಶರ್ಮಿಳಾ ಮುಖರ್ಜಿ ಮತ್ತು ಆನೇಕಲ್ನಮ ಸಯ್ಯದ್ ಸಲಾವುದ್ದೀನ್ ಪಾಷ.
ಸುಗಮ ಸಂಗೀತ ವಿಭಾಗ: ಬೆಂಗಳೂರಿನ ಆನಂದ ಮಾದಲಗೆರೆ. ಕಥಾ ಕೀರ್ತನೆ ವಿಭಾಗ: ಮಂಡ್ಯದ ಎಂ. ಎಸ್. ನಾಗರಾಜಾಚಾರ್. ಗಮಕ ವಿಭಾಗ: ಬೆಂಗಳೂರಿನ ಜಿ. ಎಸ್. ನಾರಾಯಣ- ವಾಚನ. ಹೊರದೇಶ ಕನ್ನಡ ಕಲಾವಿದರ ವಿಭಾಗ: ಅಮೇರಿಕಾದ ಕೆ.ಆರ್ಎಎಸ್. ಪ್ರಸನ್ನ, ಕಸ್ತೂರಿ- ಭರತನಾಟ್ಯ.
ಸಂಘ ಸಂಸ್ಥೆ ವಿಭಾಗ: ಬೆಂಗಳೂರಿನ ಶ್ರೀವಾಣಿ ಸ್ಕೂಲ್ ಎಜುಕೇಶನ್ ಟ್ರಸ್ಟ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು 2024 ನೇ ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.