alex Certify ಬೆಚ್ಚಿಬೀಳಿಸುವಂತಿದೆ ಕಳೆದ ವರ್ಷ ಕರ್ನಾಟಕದಲ್ಲಿ ನಡೆದಿರುವ ʼಅಪಘಾತʼಗಳ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಕಳೆದ ವರ್ಷ ಕರ್ನಾಟಕದಲ್ಲಿ ನಡೆದಿರುವ ʼಅಪಘಾತʼಗಳ ಸಂಖ್ಯೆ

ಕಳೆದ ವರ್ಷ ಇಡೀ ದೇಶದಲ್ಲೇ ಅತಿ ಹೆಚ್ಚು ಅಪಘಾತ ಪ್ರಕರಣಗಳು ವರದಿಯಾದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

2021 ರಲ್ಲಿ ಕರ್ನಾಟಕವು 34,647 ಪ್ರಕರಣಗಳೊಂದಿಗೆ ಅತಿ ಹೆಚ್ಚು ರಸ್ತೆ ಅಪಘಾತಗಳನ್ನು ದಾಖಲಿಸಿದ ದೇಶದ ಮೂರನೇ ರಾಜ್ಯ ಎಂದು NCRB ವರದಿ ಹೇಳುತ್ತದೆ.

ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಇತ್ತೀಚಿನ ವರದಿಯ ಪ್ರಕಾರ 2021 ರಲ್ಲಿ ಭಾರತದಲ್ಲಿ ಜರುಗಿದ ರಸ್ತೆ ಅಪಘಾತ ಪ್ರಕರಣಗಳಲ್ಲಿ ಕರ್ನಾಟಕದಲ್ಲಿ ಒಟ್ಟು 40,754 ಗಾಯಗೊಂಡಿದ್ದಾರೆ ಮತ್ತು 10,038 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ತಮಿಳುನಾಡು 55,682 ಪ್ರಕರಣಗಳೊಂದಿಗೆ ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳನ್ನು ವರದಿ ಮಾಡಿದ ರಾಜ್ಯಗಳ ಸ್ಥಾನದಲ್ಲಿ ಮೊದಲಿದ್ದರೆ, ನಂತರದ ಸ್ಥಾನದಲ್ಲಿ 48,219 ಪ್ರಕರಣಗಳೊಂದಿಗೆ ಮಧ್ಯಪ್ರದೇಶವಿದೆ.

ದೇಶದಲ್ಲಿ ಕಳೆದ ವರ್ಷ ಒಟ್ಟು 4,03,116 ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 1,55,622 ಜನರು ಸಾವನ್ನಪ್ಪಿದ್ದಾರೆ ಮತ್ತು 3,71,884 ಜನರು ಗಾಯಗೊಂಡಿದ್ದಾರೆ.

ಕಳೆದ ವರ್ಷ ದೇಶದಲ್ಲಿ ಅತಿ ವೇಗ ಮತ್ತು ಅಜಾಗರೂಕ ಚಾಲನೆಯಿಂದಾಗಿ ಕ್ರಮವಾಗಿ 87,050 ಮತ್ತು 42,853 ಜೀವಗಳು ರಸ್ತೆ ಅಪಘಾತದಲ್ಲಿ ಬಲಿಯಾಗಿವೆ.

ಅತಿ ವೇಗದ ಚಾಲನೆಯಿಂದಾಗಿ ಒಟ್ಟು 87,050 ಸಾವುಗಳಲ್ಲಿ 11,419 ( ಶೇ.13.1)ತಮಿಳುನಾಡಿನಿಂದ ವರದಿಯಾಗಿದೆ. ಕರ್ನಾಟಕದಲ್ಲಿ 8,797 ಸಾವುಗಳು (ಶೇ. 10.1). ಅಜಾಗರೂಕ ಚಾಲನೆ ಮತ್ತು ಓವರ್‌ಟೇಕ್‌ಗಳು ಉತ್ತರ ಪ್ರದೇಶದಲ್ಲಿ ಗರಿಷ್ಠ ಸಾವುನೋವುಗಳಿಗೆ ಕಾರಣವಾಗಿವೆ (42,853 ರಲ್ಲಿ 11,479) ಇದು ಒಟ್ಟು ಸಾವಿನ ಶೇಕಡಾ 26.8 ರಷ್ಟಿದೆ. ನಂತರದ ಸ್ಥಾನದಲ್ಲಿರುವ ರಾಜಸ್ಥಾನದಲ್ಲಿ 4,299 ಸಾವು ( ಶೇ.10) ಗಳಾಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...