ಬೆಂಗಳೂರು: ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳಿಗೆ ಮೂಲ ನಿಧಿಯನ್ನು(ಕಾರ್ಪಸ್ ಫಂಡ್) 60 ದಿನಗಳಲ್ಲಿ ವರ್ಗಾಯಿಸಬೇಕು ಎಂದು ಬಿಲ್ಡರ್ ಗಳಿಗೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ಕೆ-ರೇರಾ) ಆದೇಶಿಸಿದೆ.
ಕರ್ನಾಟಕ ರಿಯಲ್ ಎಸ್ಟೇಟ್(ನಿಯಮಗಳು ಮತ್ತು ಅಭಿವೃದ್ಧಿ) ಕಾಯ್ದೆ 2016 ಪ್ರಕಾರ, ಪ್ರಮೋಟರ್ ಅಥವಾ ಬಿಲ್ಡರ್‌ಗಳು ಮಾಲೀಕರ ಸಂಘ ಸ್ಥಾಪನೆಗೆ ಉತ್ತೇಜಿಸಬೇಕು. ಆ ಸಂಘಕ್ಕೆ ಕಾರ್ಪಸ್ ಫಂಡ್ ಅನ್ನು ವರ್ಗಾಯಿಸಬೇಕು. ಆದರೆ, ಬಹುತೇಕ ಬಿಲ್ಡರ್‌ಗಳು ನಿಧಿಯನ್ನು ಸಂಘಗಳಿಗೆ ವರ್ಗಾಯಿಸಿಲ್ಲ.
ಹಾಗಾಗಿ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳಿಗೆ ‘ಮೂಲನಿಧಿ’ಯನ್ನು(ಕಾರ್ಪಸ್ ಫಂಡ್) 60 ದಿನಗಳಲ್ಲಿ ವರ್ಗಾಯಿಸಬೇಕು ಎಂದು ಬಿಲ್ಡರ್‌ಗಳಿಗೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ಕೆ-ರೇರಾ) ಆದೇಶಿಸಿದೆ.