ಬಾಗಲಕೋಟೆ : ಅಯೋಧ್ಯೆ ರಾಮ ಮಂದಿರದಲ್ಲಿ ವಿರಾಜಮಾನವಾಗಿರುವ ಬಾಲ ರಾಮನ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ ಯೋಗಿರಾಜ್ ಕೆತ್ತಿದ್ದಾರೆ. ಈ ಮೂಲಕ ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
ಇದೀಗ ಮತ್ತೊಂದು ಸಿಹಿಸುದ್ದಿ ಎಂದರೆ ಅಯೋಧ್ಯೆ ರಾಮ ಮಂದಿರ ಮಂಡಲಾರಾಧನೆ ಪೂಜೆಗೆ ಕರ್ನಾಟಕದ ಅರ್ಚಕ ಗುರುನಾಥ್ ಜೋಶಿ ಆಯ್ಕೆಯಾಗಿದ್ದಾರೆ.ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಅರ್ಜಕ ಮುಧೋಳನ ಗುರುನಾಥ್ ಜೋಶಿ ಅವರನ್ನು ಆಯ್ಕೆ ಮಾಡಲಾಗಿದೆ.
ಅರ್ಚಕ ಗುರುನಾಥ್ ಜೋಶಿ ಅವರು ಮುರಗೋಡ ಚಿದಂಬರ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಶುಕ್ಲ ಯಜುರ್ವೇದ ಅಧ್ಯಯನ ಅಧ್ಯಯನ ಮಾಡಿದ್ದಾರೆ. ಜೋಶಿ ಅವರನ್ನು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಸದಸ್ಯರು, ಪೇಜಾವರ ಮಠದ ಪೀಠಾಧಿಪತಿ ವಿಶ್ವಪ್ರಸನ್ನತೀರ್ಥ ಶ್ರೀಗಳು ಆಯ್ಕೆ ಮಾಡಿದ್ದಾರೆ. ಫೆ.15, 16 ರಂದು ನಡೆಯಲಿರುವ ಮಂಡಲಾರಾಧನೆ ಪೂಜೆಯಲ್ಲಿ ಅರ್ಚಕ ಗುರುನಾಥ್ ಜೋಶಿ ಅವರು ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.