alex Certify RSS ವಿರುದ್ಧ ಮಾತನಾಡುವುದು ಬೆಂಕಿ ಜೊತೆಗಿನ ಸರಸದಂತೆ ಎಂದ ಈಶ್ವರಪ್ಪರಿಗೆ ಸಿದ್ದರಾಮಯ್ಯ ಟಾಂಗ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RSS ವಿರುದ್ಧ ಮಾತನಾಡುವುದು ಬೆಂಕಿ ಜೊತೆಗಿನ ಸರಸದಂತೆ ಎಂದ ಈಶ್ವರಪ್ಪರಿಗೆ ಸಿದ್ದರಾಮಯ್ಯ ಟಾಂಗ್​​

ಸಿದ್ದರಾಮಯ್ಯ ಹಾಗೂ ಆರ್​ಎಸ್​ಎಸ್​ ನಡುವಿನ ಮಾತಿನ ಯುದ್ಧ ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಈ ಯುದ್ಧವನ್ನು ತಾನು ಕೊನೆಗೊಳಿಸುವುದೂ ಇಲ್ಲ ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಘಂಟಾಘೋಷವಾಗಿ ಹೇಳಿದ್ದಾರೆ.

‘ಒಂದೇ ಪಕ್ಷದಲ್ಲಿ ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ; ಯಾರ ಕೈಯಲ್ಲೂ ಆಗದ್ದನ್ನು ಸಾಧಿಸೋದೇ ನನ್ನ ಕೆಲಸ’ – ಸಿಎಂ ಇಬ್ರಾಹಿಂ ಸ್ಫೋಟಕ ಹೇಳಿಕೆ

ಆರ್.​ಎಸ್.​ಎಸ್.​ ವಿರುದ್ಧ ಮಾತನಾಡುವುದು ಬೆಂಕಿಯ ಜೊತೆಗೆ ಸರಸವಾಡಿದಂತೆ ಎಂದು ಸಚಿವ ಕೆ.ಎಸ್.​ ಈಶ್ವರಪ್ಪ ಹೇಳಿಕೆ ನೀಡಿದ್ದರು. ಕಲಬುರಗಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹುನ್ನಾರಗಳ ಬಗ್ಗೆ ನಾನು 1977ರಿಂದಲೇ ಮಾತನಾಡುತ್ತಾ ಬಂದಿದ್ದೇನೆ ಎಂದು ಟಾಂಗ್​ ನೀಡಿದ್ದಾರೆ.

ನಾನು ನಿನ್ನೆ ಮೊನ್ನೆಯಿಂದ ಆರ್.​ಎಸ್​.ಎಸ್.​ ನೀತಿಯ ಬಗ್ಗೆ ಮಾತನಾಡುತ್ತಿಲ್ಲ. ಮೊದಲಿನಿಂದಲೂ ಆರ್​.ಎಸ್.​ಎಸ್.​​ನ ವಿಭಜಕ ನೀತಿಗಳ ವಿರುದ್ಧ ದನಿಯೆತ್ತುತ್ತಲೇ ಬಂದಿದ್ದೇನೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...