alex Certify ಬಸ್​ಗಳಲ್ಲಿ ಇನ್ಮುಂದೆ ಜೋರಾಗಿ ಹಾಡು ಕೇಳಂಗಿಲ್ಲ, ವಿಡಿಯೋ ನೋಡೋ ಹಾಗಿಲ್ಲ..! ಹೊಸ ಆದೇಶ ಪ್ರಕಟಿಸಿದ ರಾಜ್ಯ ಹೈಕೋರ್ಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್​ಗಳಲ್ಲಿ ಇನ್ಮುಂದೆ ಜೋರಾಗಿ ಹಾಡು ಕೇಳಂಗಿಲ್ಲ, ವಿಡಿಯೋ ನೋಡೋ ಹಾಗಿಲ್ಲ..! ಹೊಸ ಆದೇಶ ಪ್ರಕಟಿಸಿದ ರಾಜ್ಯ ಹೈಕೋರ್ಟ್​

ಬಸ್​ಗಳಲ್ಲಿ ಪ್ರಯಾಣ ಮಾಡುವಾಗ ಒಳ್ಳೆಯ ಹಾಡನ್ನು ಕೇಳಿಕೊಂಡು ಹೋಗೋದೇ ಚಂದ. ಆದರೆ ಕೆಲವರು ಇಯರ್​ ಫೋನ್​ಗಳಲ್ಲಿ ಹಾಡನ್ನು ಕೇಳೋದನ್ನು ಬಿಟ್ಟು ಲೌಡ್​ ಸ್ಪೀಕರ್​ನಲ್ಲಿ ಹಾಡನ್ನು ಕೇಳುತ್ತಾ ಉಳಿದವರಿಗೂ ಹಿಂಸೆ ನೀಡುತ್ತಾರೆ. ಪ್ರಯಾಣದ ವೇಳೆ ಆಗುವ ಈ ಕಿರಿಕಿರಿಯನ್ನು ತಪ್ಪಿಸುವ ಸಲುವಾಗಿ ರಾಜ್ಯ ಹೈಕೋರ್ಟ್ ಹೊಸ ಆದೇಶವೊಂದನ್ನು ಜಾರಿಗೆ ತಂದಿದೆ.

ರಾಜ್ಯ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಜೋರಾಗಿ ಮೊಬೈಲ್​ನಲ್ಲಿ ಹಾಡನ್ನು ಕೇಳಲು ಅವಕಾಶವನ್ನು ನಿರಾಕರಿಸಲಾಗಿದೆ. ರಾಜ್ಯ ಹೈಕೋರ್ಟ್​ನ ಈ ಆದೇಶದಿಂದ ಅದೆಷ್ಟೋ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ಈ ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಅರ್ಜಿ ಪರಿಶೀಲನೆ ನಡೆಸಿದ ರಾಜ್ಯ ಹೈಕೋರ್ಟ್​ ಲೌಡ್​ ಸ್ಪೀಕರ್​​ನಲ್ಲಿ ಹಾಡನ್ನು ಕೇಳುವುದಕ್ಕೆ ನಿರ್ಬಂಧ ಹೇರಿದೆ. ಜೋರಾದ ಧ್ವನಿಯಲ್ಲಿ ಹಾಡು ಕೇಳುವುದು ಹಾಗೂ ವಿಡಿಯೋಗಳನ್ನು ನೋಡುವುದಕ್ಕೆ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ನಿರ್ಬಂಧ ಹೇರುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್​ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಯಾರಾದರೂ ಜೋರಾದ ಧ್ವನಿಯಲ್ಲಿ ಹಾಡನ್ನು ಕೇಳುವುದು ಅಥವಾ ವಿಡಿಯೋಗಳನ್ನು ನೋಡುತ್ತಿದ್ದರೆ ಕೂಡಲೇ ಅವರಿಗೆ ಅದನ್ನು ನಿಲ್ಲಿಸುವಂತೆ ಸೂಚನೆ ನೀಡಬೇಕು. ಪ್ರಯಾಣಿಕ ಮಾತಿಗೆ ಬಗ್ಗದೇ ಇದ್ದಲ್ಲಿ ಅಂತವರನ್ನು ಬಸ್​ನಿಂದ ಕೆಳಗೆ ಇಳಿಸಬಹುದು ಎಂದು ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...