ಬೆಂಗಳೂರು : ಕರ್ನಾಟಕದ ಹಣ 2 ರಾಜ್ಯದ 2 ಎಟಿಎಮ್ ಗಳಿಗೆ ಹೋಗುತ್ತಿದೆ ಎಂದು ಮಾಜಿ ಸಚಿವ ಆರ್ ಅಶೋಕ್ ವಾಗ್ಧಾಳಿ ನಡೆಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಚಿವ ಆರ್ ಅಶೋಕ್ ಸರ್ಕಾರ ಬಂದು 4 ತಿಂಗಳಾದರೂ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿಲ್ಲ, ತನಿಖೆ ಮಾಡುತ್ತೇವೆ, ಆಮೇಲೆ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಾರೆ, ಅದಕ್ಕಾಗಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಕಾಂಗ್ರೆಸ್ ಸರ್ಕಾರ ತೆಲಂಗಾಣ, ಮಧ್ಯಪ್ರದೇಶವನ್ನು ಕರ್ನಾಟಕ ದತ್ತು ತೆಗೆದುಕೊಂಡಿದೆ. ಹಣ ಬಿಡುಗಡೆ ಮಾಡಿದರೇ ಪಂಚರಾಜ್ಯ ಚುನಾವಣೆಗೆ ಹಣ ಕೊಡಲು ಆಗಲ್ಲ.. ಎರಡು ಕಡೆ ಎರಡು ಎಟಿಎಮ್ ಇದೆ, ಅಲ್ಲಿಗೆ ಹಣ ಹೋಗುತ್ತಿದೆ ಎಂದು ಮಾಜಿ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದ ಲೂಟಿಗೆ ಇನ್ನೊಂದು ಸ್ಕೆಚ್ ಹಾಕಿದೆ : BJP
ರಾಜ್ಯವನ್ನು ಲೂಟಿ ಹೊಡೆಯುವುದಕ್ಕೆ ಸದಾ “ಸಿದ್ದ”ವಾಗಿರುವ ಸರ್ಕಾರ, ಈಗ ರಾಜ್ಯದ ಲೂಟಿಗೆ ಇನ್ನೊಂದು ಸ್ಕೆಚ್ ಹಾಕಿದೆ. ಹಿಂದೆ ಸಿಂಗಾಪುರದಿಂದ ಮರಳು ಆಮದು ಮಾಡಿಕೊಂಡ ರೀತಿಯಲ್ಲಿ, ಈಗ ವಿದೇಶಗಳಿಂದ ಕಲ್ಲಿದ್ದಲಿನ ಆಮದು ಅಂತೆ!!!
ಸ್ವಾಮಿ ಜಾರ್ಜ್ ಅವರೇ, ವಿದೇಶದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ನೀವು ತೆಗೆದುಕೊಳ್ಳುತ್ತಿರುವ ಕಮಿಷನ್ ಎಷ್ಟು..? ರಾಜ್ಯವನ್ನು ಭ್ರಷ್ಟಾಚಾರ, ಬೆಲೆಯೇರಿಕೆ, ಅರಾಜಕತೆಯಿಂದ ಈಗಾಗಲೇ ಸಂಪೂರ್ಣ ದಿವಾಳಿ ಮಾಡಿದ್ದೀರಿ. ಇನ್ನೆಷ್ಟು ದಿವಾಳಿ ಮಾಡಬೇಕು ಎಂದು ಯೋಚಿಸಿದ್ದೀರಿ..!!? ಎಂದು ಬಿಜೆಪಿ ಟ್ವೀಟ್ ನಲ್ಲಿ ಕಿಡಿಕಾರಿದೆ.