ಕರ್ನಾಟಕ ಪ್ರವಾಸೋದ್ಯಮದ ಮತ್ತೊಂದು ಅವಕಾಶವನ್ನು ತಪ್ಪಿಸಿಕೊಳ್ಳುತ್ತಿದೆ. ಕ್ಯಾರವಾನ್ ಟೂರಿಸಂ ಅನ್ನು ಆರಂಭಿಸಲು ಆಸ್ಟ್ರೇಲಿಯಾ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಂತಹ ದೇಶಗಳು ಮುಂದೆ ಬಂದಿದ್ದವು. ಆದರೆ, ಈ ಸಂಬಂಧ ಕರ್ನಾಟಕ ಸರ್ಕಾರ ತ್ವರಿತಗತಿಯಲ್ಲಿ ನೀತಿಗಳನ್ನು ರೂಪಿಸದಿರುವ ಹಿನ್ನೆಲೆಯಲ್ಲಿ ಇದರ ಲಾಭವನ್ನು ನೆರೆಯ ಕೇರಳ ಮತ್ತು ಮಹಾರಾಷ್ಟ್ರಗಳು ಪಡೆದುಕೊಳ್ಳಲು ಮುಂದಾಗಿವೆ.
ಪ್ರವಾಸೋದ್ಯಮ ಉದ್ಯಮದ ಪರಿಣತರ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಬೇಡಿಕೆಯನ್ನು ಈಡೇರಿಸಲು ಕೇರಳ ಮತ್ತು ಗೋವಾದಲ್ಲಿ 100 ಕ್ಕೂ ಹೆಚ್ಚು ಮೋಟರ್ ಹೌಸ್ ಗಳನ್ನು ಆರಂಭಿಸಬೇಕಾಗಿದೆ.
ಕಾರಿನೊಳಗೆ ಕೊನೆಯುಸಿರೆಳೆದ 4 ನಾಯಿಗಳು; ಯುವತಿ ಅಂದರ್
ಈ ಬಗ್ಗೆ ಮಾತನಾಡಿದ ಉತ್ತರ ಕರ್ನಾಟಕದ ಏಕೈಕ ಕ್ಯಾರವಾನ್ ತಯಾರಿಕಾ ಸಂಸ್ಥೆಯಾದ ಏಬಲ್ ಡಿಸೈನ್ ನ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಹಿರೇಮಠ್ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಗ್ರಾಹಕರಿಗೆ ಐದು ಕ್ಯಾರವಾನ್ ಗಳನ್ನು ತಯಾರಿಸಿ ಕೊಟ್ಟಿದ್ದೇವೆ. ಮುಂದಿನ 10 ತಿಂಗಳಲ್ಲಿ ನಮ್ಮ ಕೇರಳದ ಗ್ರಾಹಕರಿಗೆ 12 ಮೋಟರ್ ಹೌಸ್ ಗಳನ್ನು ವಿತರಣೆ ಮಾಡಲಿದ್ದೇವೆ. ಇದೇ ವೇಳೆ, ಗೋವಾದಲ್ಲಿನ ಲಕ್ಷುರಿ ಹೊಟೇಲ್ ಮಾಲೀಕರಿಂದ ಇಂತಹ ಕ್ಯಾರವಾನ್ ಗಳನ್ನು ತಯಾರಿಸಿಕೊಡುವಂತೆ ಬೇಡಿಕೆಗಳು ಬರಲಾರಂಭಿಸಿವೆ ಎಂದು ತಿಳಿಸಿದರು.
ಲಕ್ಷುರಿ ಕ್ಯಾಂಪರ್ ನ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಗೋವಿಂದನ್ ಮಾತನಾಡಿ, ಈ ಕ್ಯಾರವಾನ್ ಪ್ರವಾಸೋದ್ಯಮದ ಬಗ್ಗೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಹಿಂದೆ ಬಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ವಿಪುಲ ಅವಕಾಶಗಳನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.