ತಾನು ಮಾಡದ ತಪ್ಪಿಗೆ 600 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ 34 ವರ್ಷದ ಹರೀಶ್ ಬಂಗೇರಾ ಎಂಬ ಎಸಿ ತಂತ್ರಜ್ಞರೊಬ್ಬರು ಸೌದಿ ಅರೇಬಿಯಾದಿಂದ ತಾಯ್ನಾಡಿಗೆ ಮರಳಿದ್ದಾರೆ.
ಮೆಕ್ಕಾ ಹಾಗೂ ಸೌದಿ ಅರೇಬಿಯಾದ ಸುಲ್ತಾನನ ಕುರಿತು ಅವಹೇಳನಕಾರಿಯಾಗಿ ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಹರೀಶ್‌ರನ್ನು ಡಿಸೆಂಬರ್ 22. 2019ರಲ್ಲಿ ಬಂಧಿಸಲಾಗಿತ್ತು.
ಆದರೆ ಪ್ರಕರಣದ ತನಿಕೆ ಕೈಗೆತ್ತಿಕೊಂಡ ಕರ್ನಾಟಕ ಪೊಲೀಸರು, ಈ ಪೋಸ್ಟ್‌ಗಳನ್ನು ಉಡುಪಿಯ ಇಬ್ಬರು ದುಷ್ಕರ್ಮಿಗಳು ಫೇಸ್ಬುಕ್‌ನಲ್ಲಿ ಸುಳ್ಳು ಐಡಿ ಸೃಷ್ಟಿಸಿ ಹಾಕಿದ್ದಾರೆ ಎಂದು ಪತ್ತೆ ಮಾಡಿದ್ದರು.
ಮಾಸ್ಕ್ ಧರಿಸದೇ ಪೊಲೀಸರಿಗೆ ಕಿರಿಕಿರಿ ಮಾಡಿದ ವ್ಯಕ್ತಿ ಅರೆಸ್ಟ್….!
ಆಪಾದಿತರಾದ ಅಬ್ದುಲ್ ಹುಯೆಜ಼್ ಹಾಗೂ ಅಬ್ದುಲ್ ತಯೆಜ಼್‌ರನ್ನು ಅಕ್ಟೋಬರ್ 2020ರಲ್ಲಿ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಪೊಲೀಸರ ತನಿಖಾ ವರದಿಗಳನ್ನು ಸೌದಿ ಅಧಿಕಾರಿಗಳ ಮುಂದೆ ಪ್ರಸ್ತುತಪಡಿಸಿದ ಬಂಗೇರಾ ಕುಟುಂಬ ಸೌದಿ ಜೈಲಿನಿಂದ ಬಿಡಿಸಿಕೊಳ್ಳಲು ಕೊನೆಗೂ ಸಫಲವಾಗಿದೆ.
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬುಧವಾರ ಆಗಮಿಸಿದ ಬಂಗೇರಾ ಕರ್ನಾಟಕ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಕೋವಿಡ್-19 ಕಾರಣದಿಂದಾಗಿ ಸೌದಿಯಲ್ಲಿ ಕೋರ್ಟ್‌ಗಳು ಕೆಲಸ ಮಾಡದೇ ಇದ್ದ ಕಾರಣ ತಮ್ಮ ಬಿಡುಗಡೆ ಇನ್ನಷ್ಟು ನಿಧಾನವಾಯಿತು ಎಂದು ಬಂಗೇರಾ ತಿಳಿಸಿದ್ದಾರೆ.
ಮಡದಿ ಸುಮನಾ ಹಾಗೂ ಮಗಳು ಹನ್ಸಿಕಾ ಬಂಗೇರಾರರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದಾರೆ.