ನವದೆಹಲಿ: ಕರ್ನಾಟಕದ ಹಿಜಾಬ್ ವಿಚಾರ ಲೋಕಸಭೆಯನ್ನು ತಲುಪಿದ್ದು, ಪ್ರತಿಪಕ್ಷಗಳು ಹಿಜಾಬ್ ವಿವಾದವನ್ನು ಭಾರತದ ವೈವಿಧ್ಯತೆಯ ಅಂತ್ಯ ಎಂದು ಟೀಕಿಸಿವೆ.
ಇತ್ತೀಚಿನ ಬೆಳವಣಿಗೆಗಳು ಭಾರತದ ವೈವಿಧ್ಯತೆಗೆ ಬೆದರಿಕೆಯಂತಿವೆ ಎಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳು ವಿಷಯ ಪ್ರಸ್ತಾಪಿಸಿವೆ. ಇದರೊಂದಿಗೆ ಸಂಸತ್ ನಲ್ಲಿಯೂ ಕರ್ನಾಟಕದ ಹಿಜಾಬ್ ವಿಚಾರ ಪ್ರತಿಧ್ವನಿಸಿದೆ.
“ನಾವು ನಮ್ಮ ಭಾರತವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ? ನಮ್ಮ ವೈವಿಧ್ಯತೆಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಸಾಂವಿಧಾನಿಕ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಶಿಕ್ಷಣ ಸಚಿವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಎಂದು ಲೋಕಸಭೆಯಲ್ಲಿ ಕೇರಳದ ಕಾಂಗ್ರೆಸ್ ಸಂಸದ ಟಿ.ಎನ್. ಪ್ರತಾಪನ್ ಆಗ್ರಹಿಸಿದ್ದಾರೆ.