ಕರ್ನಾಟಕದಲ್ಲಿ ಆರಂಭವಾದ ಹಿಜಾಬ್ ವಿವಾದ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ನಟಿ ಝೈರಾ ವಾಸಿಮ್ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ಸಮಸ್ಯೆ ಬಗ್ಗೆ ತಮ್ಮ ಅಭಿಪ್ರಾಯ ನೀಡಿದ್ದು, ಶಾಲೆಗಳಲ್ಲಿ ಹಿಜಾಬ್ ನಿಷೇಧವನ್ನು ಟೀಕಿಸುವ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.
ಬುರ್ಖಾ ಧರಿಸಿದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಎಸ್.ಪಿ. ಕಾರ್ಯಕರ್ತ…!
ಹಿಜಾಬ್ ಒಂದು ಆಯ್ಕೆಯಲ್ಲ, ಆದರೆ ಇಸ್ಲಾಂ ಧರ್ಮದ ಬದ್ದತೆ ಎಂದು ಝೈರಾ ವಾಸಿಮ್ ಬರೆದುಕೊಂಡಿದ್ದಾರೆ.
ನಾನು, ಹಿಜಾಬ್ ಧರಿಸುವ ಮಹಿಳೆಯಾಗಿ ಕೃತಜ್ಞತೆ ಮತ್ತು ನಮ್ರತೆಯಿಂದ, ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಈ ಸಂಪೂರ್ಣ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತೇನೆ ಮತ್ತು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.
ಮುಸ್ಲಿಂ ಮಹಿಳೆಯರನ್ನು ಹಿಜಾಬ್ ಮತ್ತು ಶಿಕ್ಷಣದ ನಡುವೆ ಆಯ್ಕೆ ಮಾಡಲು ಒತ್ತಾಯಿಸುವುದು ಅನ್ಯಾಯ. ಮುಸ್ಲಿಂ ಮಹಿಳೆಯರ ವಿರುದ್ಧ ಈ ಪಕ್ಷಪಾತ ಮಾಡುವುದು ಸಂಪೂರ್ಣ ಅನ್ಯಾಯವಾಗಿದೆ. ನಿರ್ದಿಷ್ಟ ಆಯ್ಕೆಯನ್ನು ಮಾಡಲು ಅವರನ್ನು ಒತ್ತಾಯಿಸಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.
ಸಬಲೀಕರಣದ ಹೆಸರಿನಲ್ಲಿ ಇದೆಲ್ಲವನ್ನೂ ಮಾಡಲಾಗುತ್ತಿದೆ ಎಂಬ ಬಿಂಬಿಸುವುದು ಇನ್ನೂ ಕೆಟ್ಟದಾಗಿದೆ ಎಂದು ಟೀಕಿಸಿದ್ದಾರೆ.