ಬೆಂಗಳೂರು: ‘ಕರ್ನಾಟಕ ಕಲರಿಪ್ಪಯಟ್ಟು ಅಸೋಸಿಯೇಷನ್’ ಗೆ ರಾಜ್ಯ ಸಹಕಾರ ಇಲಾಖೆ ರಿಜಿಸ್ಟ್ರಾರ್ ವಿತರಿಸಿದ್ದ ನೋಂದಣಿ ಪ್ರಮಾಣ ಪತ್ರವನ್ನು ರದ್ದುಪಡಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಕರ್ನಾಟಕ ಕಲರಿಪ್ಪಯಟ್ಟು ಅಸೋಸಿಯೇಷನ್ ನೋಂದಣಿ ಪ್ರಮಾಣ ಪತ್ರ ಪ್ರಶ್ನಿಸಿ ‘ಕರ್ನಾಟಕ ಕಲರಿಪಯಟ್ಟು ಅಸೋಸಿಯೇಷನ್’ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ಕರ್ನಾಟಕ ಕಲರಿಪಯಟ್ಟು ಅಸೋಸಿಯೇಷನ್ ಹೆಸರನ್ನು ನಕಲಿ ಮಾಡಲಾಗಿದೆ. ಕರ್ನಾಟಕ ಕಲರಿಪಯಟ್ಟು ಸಂಘದ ಹೆಸರಿಗೆ ಹೆಚ್ಚುವರಿಯಾಗಿ ‘ಪಿ’ ಸೇರ್ಪಡೆ ಮಾಡಿಕೊಂಡು ಕಲರಿಪ್ಪಯಟ್ಟು ಸಂಘ ರಚಿಸಲಾಗಿದೆ. ಇಂತಹ ನಕಲನ್ನು ಅನುಮತಿಸಲಾಗದು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ನೋಂದಣಿ ಪ್ರಮಾಣ ಪತ್ರ ರದ್ದು ಮಾಡಿದೆ.