ಬೆಂಗಳೂರು : ಕರ್ನಾಟಕದಲ್ಲಿ 6,395 ಆನೆ, 563 ಹುಲಿಗಳಿವೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಕರ್ನಾಟಕವು ಆನೆ ಹಾಗೂ ಹುಲಿಗಳ ನೆಚ್ಚಿನ ತಾಣವಾಗಿದೆ. ರಾಜ್ಯದಲ್ಲಿ 6,395 ಆನೆಗಳು ಹಾಗೂ 563 ಹುಲಿಗಳಿವೆ. ಜನರು ಆನೆಗಳೊಂದಿಗೆ ಸಹಬಾಳ್ವೆ ನಡೆಸುತ್ತಾ ಬಂದಿದ್ದಾರೆ. ಆದರೆ ಇತ್ತೀಚೆಗೆ ವಾಸಿಸುತ್ತಿದ್ದ ಗಡಿಗಳು ಬದಲಾಗುತ್ತಿರುವುದು, ಅಭಿವೃದ್ಧಿ ಚಟುವಟಿಕೆ ಹೆಚ್ಚಿರುವುದು, ಹವಾಮಾನ ಬದಲಾವಣೆ ಆನೆಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತಿದೆ. ಇದರಿಂದ ಸಂಘರ್ಷ ನಡೆಯುತ್ತಿದೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ₹150 ಕೋಟಿ ವ್ಯಯಿಸುತ್ತಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.