ಧಾರವಾಡದ ಮತ್ತಿಘಟ್ಟ ಗ್ರಾಮದ ರೈತರೊಬ್ಬರು 20 ಗುಂಟೆ ಜಮೀನಿನಲ್ಲಿ 72 ತಳಿಯ ರಾಗಿ ಬೆಳೆದಿದ್ದಾರೆ. 46 ವರ್ಷ ವಯಸ್ಸಿನ ಈಶ್ವರ ಗೌಡ ಪಾಟೀಲ ಹೆಸರಿನ ಈ ವ್ಯಕ್ತಿಯ ಹೊಲಕ್ಕೆ ಭೇಟಿ ನೀಡಲು ಅಕ್ಕ ಪಕ್ಕದ ಗ್ರಾಮಗಳು ಮಾತ್ರವಲ್ಲ, ನೆರೆ ರಾಜ್ಯಗಳ ರೈತರೂ ಸಹ ಬರುತ್ತಿದ್ದಾರೆ.
ಬೆಳೆಗಳ ಪರಂಪರೆ ಸಂರಕ್ಷಿಸುವುದಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಈಶ್ವರ ಗೌಡ, ಸಾವಯವ ಉತ್ಸಾಹಿಗಳ ಬೆಂಬಲದಿಂದ ಸುಮಾರು 80ಕ್ಕೂ ಹೆಚ್ಚಿನ ತಳಿಯ ರಾಗಿ ಬೀಜಗಳನ್ನು ಕ್ರೋಢೀಕರಿಸಿ ತಮ್ಮ ಜಮೀನಿನಲ್ಲಿ ಬಿತ್ತಿದ್ದಾರೆ.
ಕಾಬೂಲ್ ಕಡಲೆ ಸಲಾಡ್ ಮಾಡಿ ಸವಿಯಿರಿ
“ಸಹಜ ಸಮೃದ್ಧ ತಂಡ ನನಗೆ 80 ತಳಿಗಳ ಬೀಜಗಳನ್ನು ಕೊಟ್ಟಿತ್ತು. ಇವುಗಳ ಪೈಕಿ 8 ತಳಿಗಳು ಮೊಳಕೆಯೊಡೆಯಲಿಲ್ಲ. ಆದರೆ ಮಿಕ್ಕ 72 ತಳಿಗಳು ಚೆನ್ನಾಗಿ ಬೆಳೆದಿವೆ. ನನಗೆ ಹೆಚ್ಚಿನ ತಳಿಗಳ ಬಗ್ಗೆ ಗೊತ್ತಿರಲಿಲ್ಲ. ಇವುಗಳೆಲ್ಲಾ ಧಾನ್ಯಗಳಿಂದ ನಳನಳಿಸುತ್ತಿರುವುದನ್ನು ನೋಡಿ ನನಗೆ ಖುಷಿಯಾಗಿದೆ, ಎಲ್ಲವೂ ಸಾವಯವವಾಗಿ ಬೆಳೆದಿವೆ.
ಮೂರು ವರ್ಷಗಳ ಹಿಂದೆ 24 ತಳಿಗಳನ್ನು ಬೆಳೆಯಲು ಯತ್ನಿಸಿದ ಈಶ್ವರ ಗೌಡ, ಈ ಬಾರಿ ತಮ್ಮ ಈ ಪ್ರಯತ್ನವನ್ನು ಇನ್ನಷ್ಟು ವಿಸ್ತರಿಸಿದ್ದಾರೆ. ಅವರ ಜಮೀನಿನಲ್ಲಿ ಈಗ 72 ತಳಿಗಳ 120 ಸಸಿಗಳು ಬೆಳೆದು ನಿಂತಿವೆ. ಈ ಸಸಿಗಳನ್ನು ಪರಸ್ಪರ ಒಂದೂವರೆ ಅಡಿ ಅಂತರದಲ್ಲಿ ನೆಡಲಾಗಿದೆ.
ಪಾಟೀಲರ ಫಾರಂ ವೀಕ್ಷಿಸಲು ಭೇಟಿ ನೀಡಿದ ಆಂಧ್ರ ಪ್ರದೇಶದ ರೈತ ಮೋಹನ್ ಕೃಷ್ಣ ಈ ಬಗ್ಗೆ ಮಾತನಾಡಿ, “ನಾನು ಪುಟ್ಟ ಹುಡುಗನಾಗಿದ್ದಾಗ ನೋಡಿದ್ದ ಅನೇಕ ತಳಿಗಳನ್ನು ಇಲ್ಲಿ ಬೆಳೆಯಲಾಗಿದೆ. ನನ್ನ ತಂದೆ ಹಾಗೂ ಅಜ್ಜನಿಂದ ಇವುಗಳ ಪೈಕಿ ಕೆಲವುಗಳ ಬಗ್ಗೆ ಕೇಳಿದ್ದೆ. ಬಹಳ ಹಿಂದೆ ಕಳೆದು ಹೋಗಿದ್ದ ನಿಧಿಯನ್ನು ಹೀಗೆ ಕಂಡುಕೊಂಡಿರುವುದು ಒಳ್ಳೆಯದು,” ಎಂದಿದ್ದಾರೆ. ಪಾಟೀಲರು ಈ ಎಲ್ಲಾ 72 ತಳಿಗಳ ಬೀಜಗಳನ್ನು ಬೀಜ ಬ್ಯಾಂಕ್‌ನಲ್ಲಿ ಜಮಾ ಮಾಡಿದ್ದಾರೆ.