ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವತಿಯಿಂದ ಕೆ -ಸೆಟ್ ಪರೀಕ್ಷೆ 2023ರ ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ.
ಜನವರಿ 13ರಂದು ಕೆಇಎ 42 ವಿವಿಧ ಪತ್ರಿಕೆಗಳಿಗೆ ಪರೀಕ್ಷೆ ನಡೆಸಿದ್ದು, ಜನವರಿ 29ರಂದು ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು. ಪ್ರಕಟಿಸಲಾದ ಕೀ ಉತ್ತರಗಳಿಗೆ ಆಕ್ಷೇಪಣೆ ಆಹ್ವಾನಿಸಲಾಗಿತ್ತು. 23 ಪತ್ರಿಕೆಗಳ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಕೆ ಆಗಿದ್ದವು. ಅವುಗಳಲ್ಲಿ 22 ಪತ್ರಿಕೆಗಳಲ್ಲಿ ವಿಷಯ ತಜ್ಞರ ಸಮಿತಿಗಳು ನೀಡಿದ ಶಿಫಾರಸಿನಂತೆ ಕೆಲವು ಕೀ ಉತ್ತರಗಳು ಬದಲಾಗಿವೆ. ಪರಿಷ್ಕೃತ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.