ಚಿಕ್ಕಮಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಟೆಂಪಲ್ ರನ್ ಆರಂಭಿಸಿದ್ದಾರೆ. ಸಾಲು ಸಾಲು ದೇವಾಲಯಗಳಿಗೆ ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ನಿನ್ನೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದ್ದ ಡಿ.ಕೆ. ಶಿವಕುಮಾರ್ ಹಾಗೂ ಕುಟುಂಬ ಇಂದು ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ತೆರಳಿದ್ದು, ಚಂಡಿಕಾಯಾಗ ನೆರವೇರಿಸಿದ್ದಾರೆ.
15ಕ್ಕೂ ಹೆಚ್ಚು ಪುರೋಹಿತರ ನೇತೃತ್ವದಲ್ಲಿ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಡಿ.ಕೆ. ಶಿವಕುಮಾರ್ ದಂಪತಿ ಚಂಡಿಕಾಯಾಗ ಮಾಡಿದ್ದಾರೆ. ಉಡುಪಿ ಜ್ಯೋತಿಷಿ ಸಿ.ಎಸ್. ದ್ವಾರಕಾನಾಥ್ ಸಲಹೆಯಂತೆ ಡಿ.ಕೆ. ಶಿವಕುಮಾರ್ ನಿನ್ನೆ ಸಂಜೆ ಚಂಡಿಕಾಯಾಗದ ಸಂಕಲ್ಪ ಮಾಡಿದ್ದರು. ಇಂದು ಚಂಡಿಕಾಯಾಗ ನೆರವೇರಿಸಿದ್ದು, ಶತ್ರು ನಾಶ, ಅಧಿಕಾರ, ಇಷ್ಟಾರ್ಥ ಸಿದ್ಧಿಗಾಗಿ ಈ ಯಾಗ ನಡೆಸಲಾಗುತ್ತದೆ.