alex Certify BIG NEWS: ಸದನದಲ್ಲಿ ‘ಗೂಂಡಾಗಿರಿ’ ಪದ ಬಳಕೆ; ಸಿಎಂ ವಿರುದ್ಧ ವಿಪಕ್ಷಗಳ ಭುಗಿಲೆದ್ದ ಆಕ್ರೋಶ; ಸಭಾತ್ಯಾಗ ಮಾಡುತ್ತೇವೆ ಎಂದ ಬಿಜೆಪಿ ಸದಸ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸದನದಲ್ಲಿ ‘ಗೂಂಡಾಗಿರಿ’ ಪದ ಬಳಕೆ; ಸಿಎಂ ವಿರುದ್ಧ ವಿಪಕ್ಷಗಳ ಭುಗಿಲೆದ್ದ ಆಕ್ರೋಶ; ಸಭಾತ್ಯಾಗ ಮಾಡುತ್ತೇವೆ ಎಂದ ಬಿಜೆಪಿ ಸದಸ್ಯರು

ಬೆಂಗಳೂರು: ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣದ ಮೇಲೆ ವಿಧಾನಪರಿಷತ್ ನಲ್ಲಿ ಉತ್ತರಿಸುತ್ತಿದ್ದಾಗ ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಸಿಎಂ ಮಾತಿಗೆ ಅಡ್ಡಿಪಡಿಸಿದರು. ಇದರಿಂದ ಸಿಟ್ಟಿಗೆದ್ದ ಸಿಎಂ ಸಿದ್ದರಾಮಯ್ಯ ಏನ್ ಗೂಂಡಾಗಿರಿ ಮಾಡ್ತೀರಾ? 7 ಕೋಟಿ ಕನ್ನಡಿಗರು ನೋಡುತ್ತಿದ್ದಾರೆ. ನಾವು ಯಾವುದಕ್ಕೂ ಹೆದುರುವುದಿಲ್ಲ ಎಂದು ಗುಡುಗಿದ್ದಾರೆ.

ಸದನದಲ್ಲಿ ‘ಗೂಂಡಾಗಿರಿ’ ಪದ ಬಳಕೆಗೆ ವಿಪಕ್ಷ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಕಿಡಿಕಾರಿದರು. ಈ ವೇಳೆ ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ವಿಧಾನಸೌಧದಲ್ಲಿ ತೊಡೆ ತಟ್ಟಿದ್ದು ನೀವಾ, ನಾವಾ? ನಮಗೆ ಗೂಂಡಾಗಿರಿ ಅಂತೀರಲ್ಲಾ? ನೀವು ಗೂಂಡಾಗಳು, ನಿಮ್ಮ ಗೂಂಡಾಗಿರಿಗೆ ನಾವು ಹೆದರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ವಿರುದ್ಧ ಬಿಜೆಪಿ ಸದದ್ಯರು ಧಿಕ್ಕಾರ ಕೂಗಿದರು. ಈ ವೇಳೆ ಮಾತು ಮುಂದುವರೆಸಿದ ಸಿಎಂ ಸಿದ್ದರಾಮಯ್ಯ, ಫ್ಯಾಕ್ಟ್ ಈಸ್ ಫ್ಯಾಕ್ಟ್ ವಿಪಕ್ಷಗಳ ಈ ನಡೆಯನ್ನು ಸಹಿಸಲ್ಲ. ಬಿಜೆಪಿಯವರು ಕನ್ನಡಿಗರ ವಿರೋಧಿಗಳು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಅದೇ ಧೋರಣೆ ಹೊಂದಿದ್ದಾರೆ. ಬಜೆಟ್ ವೇಳೆ ಒಪ್ಪಿಕೊಂಡಿದ್ದ 5300 ಕೋಟಿ ಬಿಡುಗಡೆ ಮಾಡಿಲ್ಲ. 1 ಸಾವಿರ ಕೋಟಿ ಹಣ ನಾವು ಬಿಡುಗಡೆ ಮಾಡಿದ್ದೇವೆ ಎಂದರು. ಈ ವೇಳೆ ನಮಗೆ ಉತ್ತರ ಬೇಕಿಲ್ಲ. ಗೂಂಡಾಗಿರಿ ಹೇಳಿಕೆಗೆ ಸಿಎಂ ವಿಷಾದ ವ್ಯಕ್ತಪಡಿಸಬೇಕು ಇಲ್ಲವಾದಲ್ಲಿ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಪಟ್ಟು ಹಿಡಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...