ಬೆಂಗಳೂರು: ಕಾವೇರಿ ನೀರಿಗಾಗಿ ರಾಜ್ಯದಲ್ಲಿ ಹೋರಾಟ ಭುಗಿಲೆದ್ದಿದ್ದು, ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಸೆಪ್ಟೆಂಬರ್ 29ರಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ.
ಸೆ.29ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ಗೆ ಕರೆ ನೀಡಲಾಗಿದ್ದು, ಅಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆಯೊಡ್ದಿ ಆಕ್ರೋಶ ವ್ಯಕ್ತಪಡಿಸುವುದಾಗಿ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಾಹನ ಸಂಚಾರಕ್ಕೂ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ.
ಕರ್ನಾಟಕ ಬಂದ್ ಗೆ ಕನ್ನಡ ಚಿತ್ರರಂಗ ಬೆಂಬಲ ಘೋಷಿಸಿದ್ದು, ಸ್ಯಾಂಡಲ್ ವುಡ್ ನಟ-ನಟಿಯರು ಪ್ರತಿಭಟನೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಬಂದ್ ಗೆ ಓಲಾ, ಊಬರ್, ಆಟೋ, ಗೂಡ್ಸ್ ವಾಹನ ಮಾಲೀಕರು ಹಾಗೂ ಚಾಲಕರ ಸಂಘ, ರೈತ ಸಂಘಟನೆಗಳು, ಖಾಸಗಿ ವಾಹನ ಮಾಲೀಕರು, ಹೋಟೆಲ್ ಮಾಲೀಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಪರ ವಿವಿಧ ಸಂಘಟನೆಗಳು ಸಾಥ್ ನೀಡಿವೆ. ಈ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಸಂಪೂರ್ಣ್ ಬಂದ್ ವಾತಾವರಣ ನಿರ್ಮಾಣವಾಗಲಿದೆ.
ಏನಿಲ್ಲ?
ಓಲಾ, ಊಬರ್ ಸೇವೆಗಳು
ಆಟೋ
ಖಾಸಗಿ ಬಸ್ ಗಳು
ಖಾಸಗಿ ವಾಹನ ಗಳ ಸಂಚಾರ
ಟ್ರಕ್, ಗೂಡ್ಸ್ ಸಾರಿಗೆ
ಮಾರುಕಟ್ಟೆಗಳು
ಬೀದಿಬದಿ ವ್ಯಾಪಾರ
ಚಿತ್ರಮಂದಿರಗಳು
ಹೋಟೆಲ್
ಮಾಲ್
ಬೇಕರಿ ಬಂದ್ ಆಗಲಿವೆ
ಏನಿರುತ್ತೆ?
ಆಸ್ಪತ್ರೆ
ತುರ್ತು ಸೇವೆ
ಆಂಬುಲೆನ್ಸ್
ಔಷಧಾಲಯಗಳು
ಹಾಲಿನ ಪಾರ್ಲರ್ ಗಳು
ಮೆಟ್ರೋ ಸೇವೆ
ಇನ್ನು ಶಾಲಾ-ಕಾಲೇಜುಗಳು ಹಾಗೂ ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ ಬಸ್ ಸೇವೆಗಳ ಬಗ್ಗೆ ಇನ್ನೂ ಯಾವುದೇ ನಿರ್ಧಾರಗಳು ಹೊರಬಿದ್ದಿಲ್ಲ.