ಬೆಂಗಳೂರು: ಮರಾಟ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳಿಂದ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಕೆಲವು ಸೇವೆಗಳು ಸ್ಥಗಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸರ್ಕಾರಿ ಬಸ್ ಸಂಚಾರ ಎಂದಿನಂತೆ ಇರುತ್ತದೆ. ಇದರೊಂದಿಗೆ ಖಾಸಗಿ ಬಸ್, ಪ್ರಯಾಣಿಕರ ವಾಹನಗಳು, ಸರ್ಕಾರಿ ಕಚೇರಿ, ಮೆಟ್ರೋ ಸೇವೆ, ಆಸ್ಪತ್ರೆ ಮೆಡಿಕಲ್ ಸ್ಟೋರ್, ಅಂಬುಲೆನ್ಸ್, ರೈಲು ಸಂಚಾರ, ಹೋಟೆಲ್, ಹಣ್ಣು ತರಕಾರಿ ವ್ಯಾಪಾರ ಮೊದಲಾದವು ಇರುತ್ತವೆ.
ಓಲಾ, ಉಬರ್, ಆಟೋ, ಟ್ಯಾಕ್ಸಿ ಸಂಚಾರ ಬಂದ್ ಆಗಬಹುದು ಎಂದು ಹೇಳಲಾಗಿದೆ. ಬಂದ್ ಯಶಸ್ಸಿಗೆ ಹಲವು ಸಂಘಟನೆಗಳು ಮನವಿ ಮಾಡಿವೆ. ಆದರೆ ಕೊರೋನಾ ಲಾಕ್ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ವ್ಯಾಪಾರಸ್ಥರು, ಹೋಟೆಲ್ ಮಾಲೀಕರು ಬಂದ್ ಗೆ ನೈತಿಕ ಬೆಂಬಲ ನೀಡಿದ್ದಾರೆ. ಮರಾಠ ನಿಗಮದ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿರುವ ಸಿಎಂ ಬಂದ್ ಮಾಡದಂತೆ ಹೇಳಿದ್ದಾರೆ.