ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 5 ರಂದು ಶನಿವಾರ ಕರ್ನಾಟಕ ಬಂದ್ ಗೆ ಕರೆ ನೀಡಿವೆ.
ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರಾಜ್ಯದ ಅನೇಕ ಭಾಗದಲ್ಲಿ ಬಂದ್ ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದೆ. ಕರ್ನಾಟಕ ಬಂದ್ ಮಾಡಿ ಜನರಿಗೆ ತೊಂದರೆ ಕೊಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಬಂದ್ ನಿಂದ ಆಗುವ ನಷ್ಟಕ್ಕೆ ಆಯೋಜಕರನ್ನು ಹೊಣೆ ಮಾಡಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಅನೇಕ ಜಿಲ್ಲೆಗಳಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದಬಹುದು. ಇನ್ನು ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಗತ್ಯ ವಸ್ತು, ಸೇವೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳು ಕಡಿಮೆಯಾಗಬಹುದು. ಸರ್ಕಾರಿ ಬಸ್, ಲಾರಿ, ಮೆಟ್ರೋ, ರೈಲು, ಆರೋಗ್ಯಸೇವೆ, ಮೆಡಿಕಲ್ ಶಾಪ್, ಹಾಲು, ತರಕಾರಿ ಮೊದಲಾದವು ಇರುತ್ತವೆ. ಪ್ರತಿಭಟನೆ ಹೆಚ್ಚಾದಲ್ಲಿ ಕೆಲವು ಸೇವೆ ರದ್ದಾಗಬಹುದು. ಓಲಾ, ಉಬರ್, ಆಟೋ ಚಾಲಕರು ಬೆಂಬಲ ನೀಡಿರುವುದರಿಂದ ಬಹುತೇಕ ವಾಹನಗಳು ರಸ್ತೆಗಿಳಿಯುವುದಿಲ್ಲ. ಇನ್ನು ಕೆಲವು ಸಂಘಟನೆಗಳು ಬಂದ್ ಗೆ ನೈತಿಕ ಬೆಂಬಲ ನೀಡಿವೆ.