
ಬೆಳಗಾವಿ: ಎಂಇಎಸ್ ಪುಂಡರ ಹಲ್ಲೆ ಖಂಡಿಸಿ ಹಾಗೂ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕರ್ನಾಟಕ ಹಾಗು ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಸ್ಥಗಿತಗೊಂಡಿದೆ.
ಮಹರಾಷ್ಟ್ರದಿಂದ ಕರ್ನಾಟಕಕ್ಕೆ ಆಗಮಿಸಬೇಕಿದ್ದ ಬಸ್ ಗಳು ಬಂದಿಲ್ಲ. ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ತೆರಳಬೇಕಿದ್ದ ಬಸ್ ಗಳು ಹಾಗೂ ಮಹಾರಾಷ್ಟ್ರದಿಂದ ಬೆಳಗಾವಿಗೆ ಆಗಮಿಸಬೇಕಿದ್ದ ಬಸ್ ಗಳು ಬಂದ್ ಆಗಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಹಾರಾಷ್ಟ್ರದಿಂದ ಬೆಳಗವೈಗೆ ಪ್ರತಿದಿನ 90 ಬಸ್ ಗಳು ಆಗಮಿಸುತ್ತವೆ. ಆದರೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಏಕಾಏಕಿ ಬಸ್ ಸಂಚಾರ ಬಂದ್ ಮಾಡಿದೆ. ಮಹಾರಾಷ್ಟ್ರದ ಪುಣೆ, ಥಾಣೆ, ಮುಂಬೈ, ಮೀರಜ್, ಸಾಂಗ್ಲಿಯಿಂದ ಕರ್ನಾಟಕಕ್ಕೆ ಬರಬೇಕಿದ್ದ ಬಸ್ ಗಳು ಸಂಪೂರ್ಣ್ ಸ್ಥಗಿತಗೊಂಡಿವೆ. ಇದರಿಂದಾಗಿ ಪ್ರಯಾಣಿಕರು ಸಾರಿಗೆ ಸಂಚಾರವಿಲ್ಲದೇ ಪರದಾಟ ನಡೆಸಿದ್ದಾರೆ.