ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಶನಿವಾರ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಪುತ್ರ ಕಿಯಾನ್ ರಾಜ್ ಕಪೂರ್ ಜೊತೆಯಲ್ಲಿ ವೆಕೇಷನ್ ಮೂಡ್ನಲ್ಲಿದ್ದ ಕರೀಷ್ಮಾ ಮನೆಗೆ ಮರಳಿದ್ದಾರೆ. ಪಪ್ಪರಾಜಿಗಳು ಕರೀಷ್ಮಾರ ಫೋಟೋ ತೆಗೆಯಲು ಮುಂದಾಗುತ್ತಿದ್ದಂತೆಯೇ ನಾಚಿಕೆ ವ್ಯಕ್ತಪಡಿಸಿದ ಕಿಯಾನ್ ತಾಯಿಯ ಜೊತೆ ಫೋಟೋಗೆ ಪೋಸ್ ಕೊಡಲು ಒಪ್ಪದೇ ಅಂತರ ಕಾಯ್ದುಕೊಂಡಿದ್ದಾನೆ.
ಪಪ್ಪರಾಜೆಗಳು ತಾಯಿಯ ಜೊತೆ ಪೋಸ್ ಕೊಡುವಂತೆ ಕಿಯಾನ್ ಬಳಿ ಕೇಳಿದರೂ ಸಹ 13 ವರ್ಷದ ಕಿಯಾನ್ ಫೋಟೋಗೆ ಪೋಸ್ ಕೊಡಲು ನಾಚಿಕೆ ಮಾಡಿದ್ದಾನೆ. ಮಗನಿಗೆ ಕ್ಯಾಮರಾ ಪೋಸ್ ಕೊಡುವುದು ಕಷ್ಟವಾಗ್ತಿದೆ ಎಂಬುದನ್ನು ಅರಿತ ಕರೀಷ್ಮಾ ಪುತ್ರನನ್ನು ಅವನಷ್ಟಕ್ಕೆ ಇರಲು ಬಿಟ್ಟು ತಾವೊಬ್ಬರೇ ಕ್ಯಾಮರಾಗಳಿಗೆ ಪೋಸ್ ಕೊಟ್ಟಿದ್ದಾರೆ.
ಕರೀಷ್ಮಾ ವೆಕೇಷನ್ ಮುಗಿಸಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗ್ತಿದೆ. ಅನೇಕರು ಇದು ಪುತ್ರ ತಾಯಿಗೆ ಮಾಡಿದ ಅವಮಾನ ಎಂದು ಜರಿದಿದ್ದಾರೆ. ಇನ್ನೂ ಕೆಲವರು ಕರೀಷ್ಮಾ ಮಗನಿಗೆ ಫೋಟೋಗೆ ಪೋಸ್ ಕೊಡಲು ಒತ್ತಾಯಿಸದೇ ಆತನನ್ನು ಅವನಿಷ್ಟಕ್ಕೆ ಇರಲು ಬಿಟ್ಟಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಆದರೂ ಕೆಲವರು ನಮ್ಮ ಕಾಲದಲ್ಲಿ ನಾವು ಪೋಷಕರೊಂದಿಗೆ ಈ ರೀತಿ ವರ್ತಿಸುತ್ತಿರಲಿಲ್ಲ. ಈಗಿನ ಮಕ್ಕಳಿಗೆ ಪೋಷಕರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದೇ ತಿಳಿದಿಲ್ಲ ಎಂದು ಕಿಡಿಕಾರಿದ್ದಾರೆ.